ಗೋಳಿಜೋರಾದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಗಾಂಜಾ ಅಡ್ಡೆ

ಕಿನ್ನಿಗೋಳಿಯ ಗೋಳಿಜೋರಾ ಪ್ರದೇಶದಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಯುವಕರು ಬೆಳಗ್ಗಿನಿಂದ ಕೆಲಸಕ್ಕೆ ಹೋಗದೆ ಸಂಜೆವರೆಗೆ ಗಾಂಜಾ ಎಳೆದುಕೊಂಡು ನಶೆಯಲ್ಲಿ ಬಿದ್ದುಕೊಂಡಿರುತ್ತಾರೆ. ಗಾಂಜಾದ ನಶೆಯಲ್ಲಿ ಯಾವ ಕೃತ್ಯಗಳನ್ನು ಮಾಡಲು ಇಂದಿನ ಯುವಕರು ಹೇಸುವುದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮುಲ್ಕಿ ಪೊಲೀಸರು ಮೃತನ ಸಾವಿನ ಬಗ್ಗೆ ಕೂಲಂಕುಶ ತನಿಖೆ ನಡೆಸಿ ಮೃತನ ಬಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಅಕ್ರಮ ಗಾಂಜಾ ಅಡ್ಡೆಗಳಿಗೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.