ಗೃಹಿಣಿ ಕೊಲೆಯಲ್ಲಿ ನಿಗೂಢತೆ

ಕೊಲೆಗೀಡಾದ ದೇವಕಿ

ಕಳವು ಯತ್ನ ನಡೆದಿಲ್ಲವೆಂದ ಪೆÇಲೀಸರು

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಬೇಕಲ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆರಯಟ್ಟಡಕ್ಕಂ ಕೊಟ್ಟಿಯಡ್ಕ ನಿವಾಸಿ ದಿವಂಗತ ಪಕೀರ ಎಂಬವರ ಧರ್ಮ ಪತ್ನಿ ದೇವಕಿ (65) ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬೇಟಿ ನೀಡಿದ್ದು ತನಿಖೆಯನ್ನು ತೀವ್ರಗೊಳಿಸಲಾಗಿದೆ.
ಶನಿವಾರ ಬೆಳಿಗ್ಗೆ ಬೆರಳಚ್ಚು ತಜ್ಞರು ಹಾಗು ಶ್ವಾನದಳ ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದೆ. ಈ ಮನೆಗೆ ಎರಡು ಬಾಗಿಲುಗಳು ಮಾತ್ರ ಇದೆ. ಈ ಪೈಕಿ ಒಂದು ಬಾಗಿಲು ಮುಚ್ಚಿದ ರೀತಿಯಲ್ಲೂ ಇನ್ನೊಂದು ಬಾಗಿಲು ಅರ್ಧ ತೆರೆದ ರೀತಿಯಲ್ಲೂ ಕಾಣಿಸಿಕೊಂಡಿದೆ. ಕಳವು ಯತ್ನದ ಮಧ್ಯೆ ಕೊಲೆ ನಡೆದಿರಬಹುದೆಂಬ ಸ್ಥಳೀಯರ ಹೇಳಿಕೆಯನ್ನು ಪೆÇಲೀಸರು ತಳ್ಳಿ ಹಾಕಿದ್ದಾರೆ. ಕಳವು ಯತ್ನ ನಡೆದಿಲ್ಲವೆಂಬ ನಿರ್ಧಾರಕ್ಕೆ ಪೆÇಲೀಸರು ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆಯಲ್ಲಿ ಎದ್ದು ಕಾಣುತ್ತಿರುವ ನಿಗೂಢತೆಯನ್ನು ಬಯಲುಗೊಳಿಸುವ ರೀತಿಯಲ್ಲಿ ಪೆÇಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.
ಮಾಹಿತಿ ಅರಿತು ಘಟನಾ ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ಅಧಿಕಾರಿ ಹಾಗೂ ಕಾಞಂಗಾಡ್ ಡಿವೈಎಸ್ಪಿ ಭೇಟಿ ನೀಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪರಿಸರವಾಸಿಗಳಲ್ಲೂ ಹಲವು ಶಂಕೆಗಳು ಕೇಳಿ ಬರುತ್ತಿವೆ. ಒಬ್ಬಂಟಿಗರಾಗಿ ಮನೆಯಲ್ಲಿ ವಾಸಿಸುತ್ತಿರುವ ಮಹಿಳೆಯನ್ನು ಕೊಲೆಗೈದ ಯಾರೇ ಆಗಿರಲಿ ಆತನನ್ನು ಕಾನೂನಿನ ಮುಂದೆ ತರುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಶುಕ್ರವಾರದಂದು ಸಂಜೆ 5.30 ರ ಸುಮಾರಿಗೆ ಮಹಿಳೆ ಕತ್ತು ಹಿಸುಕಿ ಕೊಲೆಗೈದ ಸ್ಥಿತಿಯಲಿ ಮನೆಯಲ್ಲಿ ಪತ್ತೆಯಾಗಿದ್ದರು. ಸಮೀಪದ ಮನೆಯಲ್ಲೇ ವಾಸಿಸುತ್ತಿರುವ ಪುತ್ರ ಶ್ರೀಧರ್ ಮನೆಗೆ ಆಗಮಿಸಿದಾಗ ಈ ದೃಶ್ಯ ಕಂಡು ಬಂದಿತ್ತು.