ಬಪ್ಪನಾಡು ಕಟ್ಟಡದಲ್ಲಿ ಕಾರ್ಮಿಕ ನಿಗೂಢ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಬಪ್ಪನಾಡು ದೇವಳ ಬಳಿಯ ಬೀಚ್ ರಸ್ತೆಯ ಬಹುಮಹಡಿ ಕಟ್ಟಡದಲ್ಲಿ ಕೂಲಿಕಾರ್ಮಿಕನೊಬ್ಬ 8ನೇ ಮಹಡಿಯಿಂದ ನಿಗೂಢವಾಗಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ರಾಜಸ್ಥಾನ ಮೂಲದ ಕೂಲಿ ಕಾರ್ಮಿಕ ರಾಮ್ ದಯಾಳ್ ಸಿಂಗ್ (30) ಮೃತ ವ್ಯಕ್ತಿ. ಈತ ಬಪ್ಪನಾಡು ದೇವಳ ಸಮೀಪವಿರುವ ನೇಚರ್ ಎಂಬ ಹೆಸರಿನ ಬಹುಮಹಡಿ ಕಟ್ಟಡದಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಈತ ಕಟ್ಟಡದಿಂದ ಬಿದ್ದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ವರದಿ ಮಾಡಲು ತೆರಳಿದ ಪರ್ತಕರ್ತರನ್ನು ಕಟ್ಟಡದ ಸೆಕ್ಯೂರಿಟಿ ಗಾರ್ಡ್ ತಡೆದು ನಿಲ್ಲಿಸಿರುವುದು ಸ್ಥಳೀಯರ ಕೊಲೆ ಶಂಕೆ ಅನುಮಾನಕ್ಕೆ ಪುಷ್ಟಿ ನೀಡಿದೆ. ಕೆಲ ವರ್ಷಗಳಿಂದ ಈ ಕಟ್ಟಡದಲ್ಲಿ ಅನೇಕರು ಮೃತಪಟ್ಟರೂ ಮುಲ್ಕಿ ಪೊಲೀಸರು ಸೂಕ್ತ ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.