ಬಿಜೆಪಿ ನಾಯಕರ ವಿರುದ್ಧ ದಂಗೆ ಕೇಸು ಕೈಬಿಡಲು ಮುಝಫರನಗರ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಆಕ್ಷೇಪ

Soldiers stand guard on a deserted street during a curfew in Muzaffarnagar, 127 kms northeast of New Delhi, in Uttar Pradesh September 9, 2013. REUTERS/Stringer

ಮುಝಫರನಗರ : ಅರವತ್ತು ಜನರನ್ನು ಬಲಿ ತೆಗೆದುಕೊಂಡು, ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ನಿರ್ವಸಿತರನ್ನಾಗಿ ಮಾಡಿದ ಮುಝಫರನಗರದ 2013ರ ಕೋಮು ಗಲಭೆ ಪ್ರಕರಣದಲ್ಲಿ ಹಲವಾರು ರಾಜಕೀಯ ನಾಯಕರುಗಳ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಈ ಮೊಕದ್ದಮೆಯನ್ನು ಹಿಂಪಡೆಯುವ ಆದಿತ್ಯನಾಥ್ ಸರ್ಕಾರದ ತೀರ್ಮಾನಕ್ಕೆ ಮುಝಫರನಗರದ ಉಪ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲೆಯ ಅಧಿಕಾರಿಗಳು  ವಿರೋಧ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರದೇಶ ನ್ಯಾಯಾಂಗ ಇಲಾಖೆಯ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಡಳಿತ , ಇಂತಹ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು ಆರೋಪಿಗಳ ವಿರುದ್ಧ ಚಾರ್ಜ್ ಷೀಟ್ ಸಹ ಸಲ್ಲಿಸಲಾಗಿದೆ, ವಿಶೇಷ ತನಿಖಾ ದಳವೂ ತನಿಖೆ ನಡೆಸುತ್ತಿದೆ ಹಾಗಾಗಿ ಮೊಕದ್ದಮೆಯನ್ನು ಹಿಂಪಡೆಯುವುದು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದೆ.

ಉತ್ತರ ಪ್ರದೇಶ ಸರ್ಕಾರದ ಸಚಿವರಾದ ಸುರೇಶ್ ರಾಣಾ, ಮಾಜಿ ಕೇಂದ್ರ ಸಚಿವ ಸಂಜೀವ್ ಬಲಿಯಾನ್, ಸಂಸದ ಭರತೇಂದು ಸಿಂಗ್, ಶಾಸಕ ಉಮೇಶ್ ಮಲಿಕ್ ಮತ್ತು ಬಿಜೆಪಿ ನಾಯಕ ಸಾಧ್ವಿ ಪ್ರಾಚಿ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣಗಳನ್ನು  ಮುಚ್ಚಿಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಿಲ್ಲಾಡಳಿತದಿಂದ ಮಾಹಿತಿ ಕೋರಿದೆ. ಆದರೆ ನ್ಯಾಯಪರತೆಯ ದೃಷ್ಟಿಯಿಂದ ಜಿಲ್ಲಾಡಳಿತ ಸರ್ಕಾರದ ಅರ್ಜಿಯನ್ನು ತಿರಸ್ಕರಿಸಿದೆ.

ಆರೋಪಿಗಳು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದು, ನಿಷೇಧಾಜ್ಞೆಯನ್ನು ಉಲ್ಲಂಘಿದ್ದು, ಸಾರ್ವಜನಿಕ ಅಧಿಕಾರಿಗಳ ಕಾರ್ಯನಿರ್ವಹಣೆಗೆಅಡ್ಡಿ ಪಡಿಸಿದ್ದು, ಮಹಾಪಂಚಾಯತನಲ್ಲಿ ಭಾಗವಹಿಸಿದ ಕೋಮು ಗಲಭೆಯನ್ನು ಹೆಚ್ಚಿಸುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪಗಳನ್ನು ಎದುರಿಸುತ್ತಿದ್ದಾರೆ.

 

 

LEAVE A REPLY