ತಲಾಖ್ : ಮುಸ್ಲಿಮರು ಹಿಂದೂಗಳಿಂದ ಪಾಠ ಕಲಿಯಲಿ ಎಂದ ಸಚಿವ ನಾಯ್ಡು

ಅಹಮ್ಮದಾಬಾದ್ : ಹಿಂದೂ ಸಮಾಜದಲ್ಲಿ ಬಾಲ್ಯ ವಿವಾಹ, ವರದಕ್ಷಿಣೆ ಮತ್ತು ಸತಿ ಪದ್ಧತಿ ಆಚರಣೆಗಳ ಸಮಾಪ್ತಿಗೊಳಿಸಲಾದಂತೆ, ಮುಸ್ಲಿಂ ಸಮಾಜದಲ್ಲಿ ಬೇರೂರಿರುವ ತ್ರಿವಳಿ ತಲಾಕ್ ಪದ್ಧತಿಗೆ ಅಂತ್ಯ ಹಾಡಬೇಕೆಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದರು. ಮುಸ್ಲಿಮರು ಹಿಂದೂಗಳಿಂದ ಪಾಠ ಕಲಿತು, ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಕುರಿತು ಆರೋಗ್ಯಕರ ಚರ್ಚೆ ನಡೆಸಲು ಇದು ಸೂಕ್ತ ಸಮಯ ಎಂದವರು  ಅಭಿಪ್ರಾಯಪಟ್ಟರು.