ಪ್ರೆಸ್ ಮೀಟಲ್ಲಿ ಪತಿಗೆ ವಿಚ್ಛೇದನ ಘೋಷಿಸಿದ ಮುಸ್ಲಿಂ ಮಹಿಳೆ

ಸಾಂದರ್ಭಿಕ ಚಿತ್ರ

ಮಾನಸಿಕ ಕಿರುಕುಳದಿಂದ ಬೇಸತ್ತು ಈ ಕ್ರಮ

ಲಕ್ನೋ : ಕಳೆದ ಹಲವು ವರ್ಷಗಳಿಂದ ಪತಿ ತನಗೆ  ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ಬೇಸತ್ತ ಮುಸ್ಲಿಂ ಮಹಿಳೆಯೊಬ್ಬಳು ಇಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ಆತನಿಗೆ `ಖುಲಾನಾಮ’ ಕಳುಹಿಸುವುದಾಗಿ ಬಹಿರಂಗವಾಗಿ ಘೋಷಿಸಿದಳು.

ಶಾಝ್ದಾ ಖಟೂನ್ ಎಂಬ ಈ ಮಹಿಳೆ ಲಕ್ನೋ ನಿವಾಸಿ ಜುಬೈರ್ ಆಲಿ ಎಂಬಾತನನ್ನು 12 ವರ್ಷಗಳ ಹಿಂದೆ ವಿವಾಹವಾಗಿದ್ದಳು. ಆದರೆ ವೈವಾಹಿಕ ಜೀವನದುದ್ದಕ್ಕೂ ಮಾನಸಿಕ ಕಿರುಕುಳವನ್ನೇ ಅನುಭವಿಸಿದ್ದ ಆಕೆ ಒಂದು ದಿನ ಎಲ್ಲವೂ ಸರಿಹೋಗಬಹುದೆಂಬ ಆಶಾಭಾವನೆಯಿಂದಲೇ ದಿನದೂಡುತ್ತಿದ್ದಳು.

“ಆತನಿಂದ ವಿಚ್ಛೇದನ ಕೋರಿದರೂ ಆತ ನಿರಾಕರಿಸಿದ, ನನಗೆ ಕಿರುಕುಳ ನೀಡುವುದೇ ಆತ ಮತ್ತು ಆತನ ಕುಟುಂಬದವರ ಉದ್ದೇಶವಾಗಿತ್ತು” ಎಂದು ಆಕೆ ಹೇಳುತ್ತಾಳೆ.

ಕೆಲ ಸಮಯದ ಹಿಂದೆ ಶರೀಯತ್ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಆಗ್ರಹಿಸಿದ್ದರೂ ಖುಲಾ ನೀಡಲು ತನಗೆ ಅನುಮತಿ ನೀಡಲಾಗಿರಲಿಲ್ಲ ಎಂದು ಆಕೆ ವಿವರಿಸಿದ್ದಾಳೆ. ನಂತರ ಮಹಿಳಾ ಹಕ್ಕು ಕಾರ್ಯಕರ್ತೆಯೊಬ್ಬರ ಸಲಹೆ ಮೇರೆ ಯಾರಿಗೂ ಕಾಯದೆ  ತಾನೇ ಸ್ವತಹ ಪತಿಗೆ `ಖುಲಾ’ ನೀಡಲು ಆಕೆ ನಿರ್ಧರಿಸಿದ್ದಳು.