ಭಾರತ ಬಿಟ್ಟು ತೊಲಗಲು ಸೋನುಗೆ ಮುಸ್ಲಿಂ ಮುಖಂಡನ ಫರ್ಮಾನು

ಕೋಲ್ಕತ್ತಾ : “ಮುಂಜಾನೆ ಆಝಾನ್ ಸಂದರ್ಭದಲ್ಲಿ ಬಳಸಲಾಗುವ ಧ್ವನಿವರ್ಧಕದ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿರುವ ಬಾಲಿವುಡ್ ಹಾಡುಗಾರ ಸೋನಿ ನಿಗಮ್, ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಅವರು ಈ ಕೂಡಲೇ ದೇಶ ಬಿಟ್ಟು ತೊಲಗಲಿ ಎಂದು ಮುಸ್ಲಿಂ ಮುಖಂಡ ಸೈಯ್ಯದ್ ಆತೀಫ್ ಆಲಿ ಅಲ್ ಖಾದ್ರಿ ಹೇಳಿದ್ದಾರೆ. “ಸೋನು ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ. ಅವರು ಕೂಡಲೇ ತಮ್ಮ ತಪ್ಪನ್ನು ತಿದ್ದುಕೊಂಡು ಜನತೆ ಕ್ಷಮೆಯಾಚನೆ ಮಾಡಬೇಕು” ಎಂದೂ ಅವರು ಹೇಳಿದ್ದಾರೆ.

ಫತ್ವಾ ಹೇರಿಲ್ಲ : ತಾನು ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಫತ್ವಾ ಹೊರಡಿಸಿಲ್ಲ ಎಂದು ಸೈಯ್ಯದ್ ಶಾ ಅತೇಫ್ ಅಲಿ ಖುರೇಷಿ ನಿನ್ನೆ ಹೇಳಿದರು.