ನಕಲಿ ಮೌಲ್ವಿಗಳ ಪಟ್ಟಿ ತಯಾರಿಗೆ ಮುಸ್ಲಿಂ ಲಾ ಬೋರ್ಡ್ ನಿರ್ಧಾರ

ಲಕ್ನೋ : ದೇಶದಲ್ಲಿ ಮನೆಮಾಡಿಕೊಂಡಿರುವ 14 ನಕಲಿ ಬಾಬಾಗಳ ಪಟ್ಟಿ ತಯಾರಿಸಿರುವ ದೇಶದ ಹಿಂದೂ ಸಂತರ ಸರ್ವೋಚ್ಚ ಮಂಡಳಿಯಾದ ಅಖಿಲ ಭಾರತ ಅಖಾಡ ಪರಿಷತ್(ಎಐಎಪಿ), ಈ ಬಾಬಾಗಳ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಆಗ್ರಹ ಸಲ್ಲಿಸಿರುವ ರೀತಿಯಲ್ಲೇ ಇದೀಗ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‍ಬಿ) ಮುಸ್ಲಿಂ `ನಕಲಿ’ ಮೌಲ್ವಿ ಮತ್ತು ಮೌಲಾನಾಗಳ ಪಟ್ಟಿ ಮಾಡಲು ನಿರ್ಧರಿಸಿದೆ. ಶರಿಯತ್ ಕಾನೂನಿನ (ಇಸ್ಲಾಮಿಕ್ ಕಾನೂನುಗಳು) ಬಗ್ಗೆ ಸೂಕ್ತ ಜ್ಞಾನ ಇಲ್ಲದೆ ಸೂಕ್ಷ್ಮ ವಿಷಯಗಳ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಧರ್ಮಗುರುಗಳನ್ನು ತುರ್ತು ಗುರುತಿಸುವ ಅಗತ್ಯವಿದೆ ಎಂದು ಮಂಡಳಿ ಹೇಳಿದೆ ಎಂದು ಎಐಎಂಪಿಎಲ್‍ಬಿ ಮೂಲಗಳು ಹೇಳಿವೆ.