ಹಿಂದೂ ದತ್ತು ಪುತ್ರನ ವಿವಾಹವನ್ನು ಹಿಂದೂ ಯುವತಿ ಜತೆ ಮಾಡಿಸಿದ ಮುಸ್ಲಿಂ ದಂಪತಿ

ಡೆಹ್ರಾಡೂನ್ : ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆಯ ಎಷ್ಟೇ ಘಟನೆಗಳು ನಡೆದರೂ ಅಲ್ಲಿ ಮತೀಯ ಸೌಹಾರ್ದತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಡೆಹ್ರಾಡೂನಿನ ಮುಸ್ಲಿಂ ಕುಟುಂಬವೊಂದು ಸಾಕ್ಷಿಯಾಗಿದೆ. ತಾನು ಹಲವಾರು ವರ್ಷಗಳ ಹಿಂದೆ ದತ್ತು ಪಡೆದಿದ್ದ ಹಿಂದೂ ಹುಡುಗನೊಬ್ಬನ ವಿವಾಹವನ್ನು ಆತನದೇ ಸಮುದಾಯದ ಯುವತಿಯೊಂದಿಗೆ ಹಿಂದೂ ಸಂಪ್ರದಾಯದಂತೆ ನಡೆಸಿಕೊಟ್ಟು ಈ ಕುಟುಂಬ ಧನ್ಯವಾಗಿದೆ.

ಮೊಯಿನುದ್ದೀನ್ ಹಾಗೂ ಕೌಸರ್ ದಂಪತಿ  ರಾಕೇಸ್ ರಸ್ತೋಗಿಯನ್ನು ಆತ 12 ವರ್ಷದವನಿರುವಾಗ ದತ್ತು ಪಡೆದುಕೊಂಡಿತ್ತು. ಆದರೆ ಆತನನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸದೆ ಹಿಂದೂ ಧರ್ಮಾನುಸಾರವೇ ಬೆಳೆಸಿದ

ದಂಪತಿ ಫೆಬ್ರವರಿ 9ರಂದು ಆತನ ವಿವಾಹವನ್ನು ಸೋನಿ ಎಂಬ ಯುವತಿಯೊಂದಿಗೆ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

“ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಕಾಣುವ ಕುಟುಂಬದಲ್ಲಿ ನಾನು ಬೆಳೆದೆ, ನಾನು ಹೋಳಿ, ದೀಪಾವಳಿ ಹಬ್ಬವನ್ನು  ಇತರ ಹಬ್ಬಗಳೊಂದಿಗೆ ಮನೆಯಲ್ಲಿ ಎಲ್ಲರೊಂದಿಗೆ ಆಚರಿಸುತ್ತೇನೆ,” ಎಂದು ತಾನು ಬೆಳೆದಿರುವ ಕುಟುಂಬದ ಬಗ್ಗೆ ಅಭಿಮಾನದಿಂದ ರಾಕೇಶ್ ಮಾತನಾಡುತ್ತಾನೆ.

“ನನ್ನ ಕುಟುಂಬ ನನ್ನನ್ನು ಸರ್ವ ರೀತಿಯಲ್ಲೂ ಬೆಂಬಲಿಸಿದೆ. ನಾನು ಹಿಂದೂ ಯುವತಿಯನ್ನು ವಿವಾಹವಾಗಲು ನಿರ್ಧರಿಸಿದಾಗ ಅದಕ್ಕೂ ತಂದೆ ತಾಯಿ ಬೆಂಬಲಕ್ಕೆ ನಿಂತರು. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಉತ್ಸಾಹದಿಂದ ಭಾಗವಹಿಸಿದರು” ಎಂದು ರಾಕೇಶ್ ಹೇಳುತ್ತಾನೆ.

 

 

LEAVE A REPLY