ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ದೀಪಕ್, ಬಶೀರಗೆ ಶ್ರದ್ಧಾಂಜಲಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾಟಿಪಳ್ಳದ ದೀಪಕ್ ರಾವ್ ಹಾಗೂ ಆಕಾಶಭವನದ ಅಬ್ದುಲ್ ಬಶೀರ್ ಹತ್ಯೆಯನ್ನು ಖಂಡಿಸಿ ದ ಕ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಭಾವಪೂರ್ಣ ಸಂತಾಪ ಸಭೆ ನಡೆಯಿತು.

ನೆಹರೂ ಮೈದಾನದಲ್ಲಿ ನಡೆದ ಸಂತಾಪ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಅಗಲಿದ ದೀಪಕ್ ರಾವ್ ಹಾಗೂ ಅಬ್ದುಲ್ ಬಶೀರರನ್ನು ಸ್ಮರಿಸಿ ಮೌನಾಚರಿಸಿದರು. ಮಾತ್ರವಲ್ಲದೆ, ಸೇರಿದ್ದವರು ಒಗ್ಗಟ್ಟು ಪ್ರದರ್ಶಿಸಿ, ಮುಂದೆ ಜಿಲ್ಲೆಯಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಿರಲೆಂದು ಪ್ರಾರ್ಥಿಸಿದರು. ಕೈಗಳನ್ನು ಎತ್ತಿ ಹಿಡಿದು ಒಗ್ಗಟ್ಟು ಪ್ರದರ್ಶನದ ಜತೆಗೆ ಅಗಲಿದವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಿದರು.

ದೀಪಕ್ ರಾವ್ ಹಾಗೂ ಬಶೀರ್ ಎಂಬಿಬ್ಬರು ಅಮಾಯಕರ ಕೊಲೆ ಯಾವ ಕಾರಣಕ್ಕಾಗಿ ಆಗಿದೆ ಎಂದು ಹತ್ಯೆಯ ಕಾರಣಕರ್ತರನ್ನು ಪತ್ತೆಹಚ್ಚಿ ಬಂಧಿಸುವ ಕೆಲಸವನ್ನು ಸರಕಾರ ತಕ್ಷಣ ಮಾಡಬೇಕು ಎಂದು ಮುಸ್ಲಿಂ ಮುಖಂಡ ಹಮೀದ್ ಕಂದಕ್ ಆಗ್ರಹಿಸಿದರು. “ಮುಸ್ಲಿಂ ಸಮುದಾಯದ ಒಗ್ಗಟ್ಟನ್ನು ವಿಭಜಿಸಲು ಪ್ರಯತ್ನಿಸುವ, ಗಲಭೆಗಳ ಸಂದರ್ಭ ಮುಸ್ಲಿಂ ನಾಯಕನೆಂದು ಮಾಧ್ಯಮಗಳಿಗೆ ಫೆÇೀಸು ನೀಡುವ ನಮ್ಮೊಳಗಿನ ಕೆಲವರನ್ನೂ ಈ ಸಂದರ್ಭ ನಾವು ಬಹಿಷ್ಕರಿಸಬೇಕು” ಎಂದರು.

“ಮುಸಲ್ಮಾನರನ್ನು ಯಾವ ಪಕ್ಷದವರೂ ಓಲೈಕೆ ಮಾಡುವುದು ಬೇಡ. ಅದು ಬಿಟ್ಟು ಸಮುದಾಯದ ಶಕ್ತಿಯನ್ನು ಬೆಳೆಸಿ ಭದ್ರತೆ ನೀಡಿ ರಾಜಕೀಯವಾಗಿ ಅಸ್ತಿತ್ವ ಒದಗಿಸಿ” ಎಂದು ಪುತ್ತೂರು ಜುಮಾ ಮಸೀದಿ ಖತೀಬ್ ಎಸ್ ಬಿ ದಾರಿಮಿ ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು.

LEAVE A REPLY