ತಲಾಕ್ ಪದ್ಧತಿಗೆ ವಿರೋಧವಿದೆ ಎಂದ ಮುಸ್ಲಿಂ ಲಾ ಮಂಡಳಿ

ನವದೆಹಲಿ : ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‍ಬಿ) ಮೂರು ಬಾರಿ ತಲಾಖ್ ನೀಡುವ ಪದ್ಧತಿ ಮುಂದುವರಿಸಬೇಕೆಂಬ ಇಚ್ಚೆ ಹೊಂದಿಲ್ಲ ಮತ್ತು ಈ ವಿಷಯ ಮಂಡಳಿಯ ಸಲಹೆಗೆ ವಿರುದ್ಧವಾಗಿದೆ ಎಂದು ಮಂಡಳಿ ನಿನ್ನೆ ಸುಪ್ರೀಂ ಕೋರ್ಟಿಗೆ ತಿಳಿಸಿತು. ಮೊದಲು ಮಂಡಳಿ ತಲಾಖ್ ಪದ್ಧತಿಯನ್ನು ನಿಷೇಧಿಸಲು ಸರಕಾರಕ್ಕೆ ಅಥವಾ ಸುಪ್ರೀಂ ಕೋರ್ಟಿಗೆ ಅಧಿಕಾರವಿಲ್ಲ ಎಂದು ವಾದಿಸಿತ್ತು. ಮೂರು ಬಾರಿ ತಲಾಕಿಗೆ ಸಂವಿಧಾನಾತ್ಮಕ ಸಿಂಧುತ್ವದ ಕುರಿತಾದ ವಾದ-ವಿವಾದ ನಡೆಯುತ್ತಿರುವ ಹೊತ್ತಿಗೆ ಮಂಡಳಿ ಈ ಹೇಳಿಕೆ ನೀಡಿದೆ. “ನಿನ್ನೆ ಮಂಡಳಿ ಸಭೆ ನಡೆಸಿದ್ದು, ಇನ್ನೊಂದು ವಾರದಲ್ಲಿ `ನಿಕಾಹನಾಮ’ ವಿಷಯದಲ್ಲಿ ಎಲ್ಲ ಖಾಝಿಗಳಿಗೆ ಸುತ್ತೋಲೆಯೊಂದು ರವಾನಿಸಲು ನಿರ್ಧರಿಸಲಾಗಿದೆ” ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಖೆಹರ್ ನೇತೃತ್ವದ ಐವರು ಜಡ್ಡುಗಳ ನ್ಯಾಯಪೀಠಕ್ಕೆ ತಿಳಿಸಿದರು. `ನಿಕಾಹನಾಮ’ ಎಂಬುದು ಇಸ್ಲಾಮಿಕ್ ಮದುವೆ ಗುತ್ತಿಗೆ ಅಥವಾ ಪೂರ್ವಪಾವತಿ ಒಪ್ಪಿಗೆಯಾಗಿದೆ.