ವಿಚಾರವಾದಿಗಳ ಹತ್ಯೆ ದೇಶದ ಬಹುತ್ವಕ್ಕೆ ಧಕ್ಕೆ

ವ್ಯಕ್ತಿಗಳ, ಸಿದ್ಧಾಂತಗಳ, ನಂಬಿಕೆಗಳ ಹಾಗೂ ಚಿಂತನೆಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ ಇವುಗಳು ವ್ಯಕ್ತಿಗಳ ಅಲೋಚನಾ ಕ್ರಮ ಹಾಗೂ ಬದುಕಿನ ಆಶಯಗಳು ಪ್ರತಿಬಿಂಬಿಸುತ್ತದೆ. ನಮ್ಮ ವಿಚಾರ ಆಚಾರಗಳಿಗೆ ಮತ್ತೊಬ್ಬರ ಆಚಾರ ವಿಚಾರಗಳು ಎಲ್ಲೇ ವಿರೋಧ ಇದ್ದರೂ ಅದನ್ನು ವಿಚಾರಗಳಿಂದಲೇ ಎದುರಿಸಬೇಕೇ ಹೊರತು ಕೊಲೆಯಿಂದಲ್ಲ ಆದರೆ ಇತ್ತೀಚೆಗೆ ನಮ್ಮ ದೇಶದಲ್ಲಿ ನಡದಿರುವ ವಿಚಾರವಾದಿಗಳ ಕಗ್ಗೊಲೆ ಬಹುತ್ತರ ಆಘಾತದ ಮೇಲೆ ಸ್ಥಾಪಿಸಿರುವ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ ಇಲ್ಲಿ ಆಲೋಚನೆ ಹಾಗೂ ವಿವೇಚನಾ ಶಕ್ತಿಗಳಿಗೆ ಜಾಗವಿಲ್ಲ ಎಂದು ಖಾತರಿಪಡಿಸುತ್ತಿದೆ. ಈ ಕೊಲೆಗಳು ಬರೀ ವ್ಯಕ್ತಿಗಳ ಕೊಲೆಗಳಾಗದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯಾಗಿದೆ ಈ ಹಂತಕರನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗುತ್ತಿರುವುದು ಆತಂಕ ತಂದಿದೆ ಬಹು ಚಿಂತನೆಗಳ ಸಮಾಜ ನಮ್ಮದಾಗಿರುವುದರಿಂದ ನಾನೇ ಸರಿ ನನ್ನದೇ ಸರಿ. ನನ್ನ ಮಾತೇ ಕೇಳಬೇಕು ಎಂಬುದನ್ನು ಬಿಟ್ಟು ಮತ್ತೊಬ್ಬರ ಅಭಿಪ್ರಾಯಗಳನ್ನು ಒಪ್ಪದಿದ್ದರೂ ಗೌರವಿಸುವುದು ಇಂದಿನ ತುರ್ತು

  • ಉದಯ  ಬಜಗೋಳಿ ಕಾರ್ಕಳ