ತಲವಾರಿನಿಂದ ಕಡಿದು ಕೊಲೆಯತ್ನ

ನಾಲ್ವರು ಆರೋಪಿಗಳು ಪರಾರಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೋಟೆಲೊಂದರ ಮುಂಭಾಗದಲ್ಲೇ ತಲವಾರುಗಳಿಂದ ಕಡಿದು, ಬೆನ್ನಿಗೆ ಇರಿದು ಗಂಭೀರ ಗಾಯಗೊಳಿಸಿ ಕೊಲೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ.

ನಗರದ ಹೋಟೆಲ್ ನಲಪ್ಪಾಡ್ ಕುನಿಲ್ ಟವರ್ಸ್ ಫ್ಲ್ಯಾಟಿನ ಮುಂಭಾಗದಲ್ಲಿ ಮೊಹಮ್ಮದ್ ಇಜಾಸ್ ಎಂಬವರು ತನ್ನ ಸ್ಕೂಟರನ್ನು ನಿಲ್ಲಿಸಿ ಇನ್ನೇನು ಹೋಟೆಲಿನೊಳಕ್ಕೆ ತೆರಳಬೇಕೇನ್ನುವಷ್ಟರಲ್ಲಿ ಹೋಟೆಲ್ ಮುಂಭಾಗಕ್ಕೆ ಆಗಮಿಸಿದ ಚಾಬಾ, ಜಲೀಲ್ ಹಾಗೂ ಇತರ ಇಬ್ಬರು ಸೇರಿ ಮೊಹಮ್ಮದ್ ಇಜಾಸ್ ತಲೆಗೆ ತಲವಾರುಗಳಿಂದ ಕಡಿದು, ಬೆನ್ನಿಗೆ ಇರಿದು ಗಂಭೀರ ಗಾಯಗೊಳಿಸಿದ್ದಾರೆ.

ಮೊಹಮ್ಮದ್ ಇಜಾಸ್ ಜೀವ ಭಯದಿಂದ ಬೊಬ್ಬೆ ಹಾಕುತ್ತ ಫ್ಲಾಟಿನ ಮೆಟ್ಟಿಲ ಬಳಿ ಓಡಿದಾಗ ನಾಲ್ವರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಪೂರ್ವದ್ವೇಷವೇ ಕೊಲೆಯತ್ನಕ್ಕೆ ಕಾರಣ ಎನ್ನಲಾಗಿದೆ.

ರಕ್ತಸ್ರಾವದಿಂದ ತೀವ್ರ ಅಸ್ವಸ್ಥಗೊಂಡಿದ್ದ ಮೊಹಮ್ಮದ್ ಇಜಾಸÀರನ್ನು ಸಹೋದರ ರಿಯಾಜ್ ಅವರು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.