ಕೊಲೆ ಯತ್ನ ಆರೋಪಿ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನೌಷಾದ್ ಎಂಬವರ ಕೊಲೆಗೆ ಯತ್ನಿಸಿದ ಆರೋಪಿ ಉಳ್ಳಾಲ ಮೊಗವೀರಪಟ್ಣ ನಿವಾಸಿ ರಜನೀಶ್ (32) ಎಂಬಾತನನ್ನು  ರೌಡಿ ನಿಗ್ರಹದಳದ ಪೆÇಲೀಸರು ಬಂಧಿಸಿದ್ದಾರೆ.

2017ರ ಮಾರ್ಚ್ 26 ರಂದು ರಾತ್ರಿ 10 ಗಂಟೆಗೆ ತನ್ನ ಬೈಕ್‍ನಲ್ಲಿ ಕೆಲಸದ ನಿಮಿತ್ತ ಉಳ್ಳಾಲ ಗ್ರಾಮದ ಮುಕ್ಕಚ್ಚೇರಿಯಲ್ಲಿರುವ ಮುನೀರ್ ಎಂಬವರು ಸಮೂಸಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಮನೆಯಿಂದ ಹೊರಟು ಉಳ್ಳಾಲ ಪೇಟೆಯಲ್ಲಿರುವ ರೆಹ್ಮಾನಿಯಾ ಮಸೀದಿ ಬಳಿಗೆ ಬರುತ್ತಿದ್ದಾಗ ನೌಷಾದ್ ಹುಸೈನ್ ಎಂಬವರಿಗೆ ಬೈಕಿನಲ್ಲಿ ಬಂದು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

 

 

LEAVE A REPLY