ಶಿರಸಿ ಮೂಲದ ಮಹಿಳೆ ಕೊಂದ ವ್ಯಕ್ತಿ ಬಂಧನ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ರಾಮನಬೈಲ್ ಮೂಲದ ಮಹಿಳೆಯೊಬ್ಬಳನ್ನು ಬೆಂಗಳೂರಲ್ಲಿ ಕೊಂದು ನಾಪತ್ತೆಯಾಗಿದ್ದ ಶಿರಸಿ ಮೂಲದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿರಸಿಯ ರಾಮನಬೈಲಿನ ತಸ್ಲಿಮಾ ಬಾನು ಎಂಬುವವರ ಕೊಲೆಯು 15 ದಿನದ ಹಿಂದೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಆಗಿದ್ದು, ಹತ್ಯೆ ಮಾಡಿದವರ್ಯಾರು ಎಂಬುದರ ಬಗ್ಗೆ ಸ್ಥಳೀಯ ಪೊಲೀಸರು ಬೆನ್ನುಹತ್ತಿದಾಗ ಶಿರಸಿ ರಾಮನಬೈಲಿನ ಮಹಮದ್ ಮುಬೀನ್ ಶೇಖ್ ಎಂದು ಗೊತ್ತಾಗಿದ್ದು, ಆತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಶಿರಸಿಯಲ್ಲಿ ಇಬ್ಬರು ಶಾಲೆಗೆ ಹೋಗುವಾಗ ಪರಿಚಯವಾಗಿದ್ದು, 2006ರಲ್ಲಿ ಕಳ್ಳತನ ಪ್ರಕರಣ ಸಂಬಂಧ ಮಹಮದ್ ಮುಬೂನ್ ಜೈಲು ಸೇರಿದ್ದನು. ತಸ್ಲಿಮಾರನ್ನು ಅವರ ಕುಟುಂಬದವರು ಹಾಸನಕ್ಕೆ ಮದುವೆ ಮಾಡಿಕೊಟ್ಟಿದ್ದು, ಮಗು ಸಹ ಆಗಿದೆ. ಜೈಲಿನಿಂದ ಹೊರಬಂದ ಮಹಮದ್ ಮುಬೀನನು ತಸ್ಲಿಮಾರನ್ನು ಹುಡುಕಿ ಗಂಡನನ್ನು ಬಿಟ್ಟು ತನ್ನ ಜೊತೆ ಬರುವಂತೆ ಒತ್ತಾಯಿಸಿದ್ದನು. ಬಳಿಕ ದುಬೈಗೆ ಹೋಗಿ ಚಾಲಕನಾಗಿ ಹಣ ಸಂಪಾದನೆ ಮಾಡಿಕೊಂಡು ವಾಪಸ್ ಬಂದಿದ್ದನು.

ಡಿಸೆಂಬರ್ 20ರಂದು ಮಹಮದನು ಬೆಂಗಳೂರಿನ ಕಾಮಾಕ್ಷಪಾಳ್ಯದಲ್ಲಿರುವ ತಸ್ಲಿಮಾರ ಮನೆಗೆ ಹೋಗಿ ತನ್ನ ಜೊತೆಗೆ ಬರುವಂತೆ ಒತ್ತಾಯಿಸಿದ್ದ. ಅವರು ಒಪ್ಪದೇ ಇದ್ದಾಗ ಚೂರಿಯಿಂದ ಇರಿದು ಕೊಂದಿದ್ದನು. ಕಾಮಾಕ್ಷಿಪಾಳ್ಯಕ್ಕೆ ಬಂದು ಜನರ ಜೊತೆ ಆತನು ಇವರ ಮನೆ ವಿಚಾರಿಸಿದ್ದನು. ಬಳಿಕ ಪೊಲೀಸರು ತನಿಖೆ ಆರಂಭಿಸಿದಾಗ ಫೇಸ್ಬುಕ್ ಸುಳಿವು ಆಧರಿಸಿ ಈತನ ಫೋಟೋವನ್ನು ಸ್ಥಳೀಯರು ಧೃಡಪಡಿಸಿದ್ದಾರೆ. ಆತನ ಕೈ ಮೇಲೆ ತಸ್ಲೀಮಾ ಎಂದು ಬರೆದಿರುವುದು ಕಂಡುಬಂದಿದೆ. ಬಳಿಕ ಆತನು ಶಿರಸಿಗೂ ಬಂದಿದ್ದು, ಬೆಂಗಳೂರು ಪೊಲೀಸರು ಬೆನ್ನು ಹತ್ತಿ ಬಂದು ಹಿಡಿದಿದ್ದು, ಕೊಲೆಗೆ ಬಳಿಸಿದ ಚಾಕುವನ್ನು ದಾವಣಗೇರಿ ಬಳಿ ಪತ್ತೆ ಮಾಡಿದ್ದಾರೆ.

LEAVE A REPLY