ಬರಲಿದೆ ಮುನ್ನಾಭಾಯಿ 3

ಸಂಜಯ್ ದಿತ್-ಅರ್ಷದ್ ವಾರ್ಸಿ-ರಾಜಕುಮಾರ್ ಹಿರಾನಿ ಕಾಂಬಿನೇಶನ್ನಿನ ಸೂಪರ್ ಹಿಟ್ ಚಿತ್ರ `ಮುನ್ನಾ ಭಾಯಿ’ ಸೀರೀಸಿನ ಮುಂದಿನ ಭಾಗವೂ ಬರಲಿದೆ. ಸದ್ಯ ರಾಜಕುಮಾರ್ ಹಿರಾನಿ ಸಂಜಯ್ ದತ್ ಬಯೋಪಿಕ್‍ನಲ್ಲಿ ಬ್ಯೂಸಿ ಇದ್ದು ಅದಾದ ಬಳಿಕ ಅವರು `ಮುನ್ನಾಭಾಯಿ-3′ ಚಿತ್ರದ ತಯಾರಿಯಲ್ಲಿ ತೊಡಗಲಿದ್ದಾರೆ. ಈ ವಿಷಯವನ್ನು ಅರ್ಷದ್ ವಾರ್ಸಿ ಕನ್ಫರ್ಮ್ ಮಾಡಿದ್ದಾರೆ.

2003ರಲ್ಲಿ ತೆರೆಂಡ `ಮುನ್ನಾಭಾಯಿ ಎಂಬಿಬಿಎಸ್’ ಹಾಗೂ 2006ರಲ್ಲಿ ತೆರೆಕಂಡ `ಲಗೇ ರಹೋ ಮುನ್ನಾಭಾಯಿ’ ಎರಡೂ ಚಿತ್ರಗಳನ್ನೂ ಪ್ರೇಕ್ಷಕ ಬಹುವಾಗಿ ಮೆಚ್ಚಿಕೊಂಡಿದ್ದ. ಚಿತ್ರದಲ್ಲಿ ಸಂಜಯ್ ದತ್ ಹಾಗೂ ಅರ್ಷದ್ ವಾರ್ಸಿಯ ಮುನ್ನಾಭಾಯಿ-ಸರ್ಕೀಟ್ ಕಾಂಬಿನೇಶನ್ ತೆರೆಯ ಮೇಲೆ ಕಮಾಲ್ ಮಾಡಿತ್ತು. ಈಗ ಅದೇ ತರಹದ ಮ್ಯಾಜಿಕ್ ಕ್ರಿಯೇಟ್ ಮಾಡಲು ಹಿರಾನಿ ಯೋಜನೆ ಹಾಕಿಕೊಂಡಿದ್ದಾರೆ.

ರಣಬೀರ್ ಕಪೂರ್ ಅಭಿನಯದ ದತ್ ಬಯೋಪಿಕ್ ಚಿತ್ರೀಕರಣ ಈಗ ಕೊನೆಯ ಹಂತದಲ್ಲಿದ್ದು ಅದಾದ ಬಳಿಕ ಹಿರಾನಿ `ಮುನ್ನಾಭಾಯಿ-3′ ಚಿತ್ರದ ಪ್ರಿಪ್ರೊಡಕ್ಷನ್ ಪ್ರಾರಂಭಿಸಲಿದ್ದಾರೆಯಂತೆ.