ಮುಂಬೈ ಮೂಲದ ಆಶ್ಲಿ ಭಾರತದಲ್ಲಿ ಮುಂದಿನ ಅಮೆರಿಕಾ ರಾಯಭಾರಿ ?

ವಾಷಿಂಗ್ಟನ್ : ಮುಂಬೈ ಮೂಲದ ಮಾಜಿ ಶ್ವೇತ ಭವನ ಅಧಿಕಾರಿ ಆಶ್ಲಿ ಟೆಲ್ಲಿಸ್ ಅವರನ್ನು  ಅಧ್ಯಕ್ಷ ನಿಯೋಜಿತ ಟ್ರಂಪ್ ಭಾರತದಲ್ಲಿ ಅಮೆರಿಕಾದ ಹೊಸ ರಾಯಭಾರಿಯಾಗಿ ನೇಮಿಸುವ ಸಾಧ್ಯತೆಗಳಿವೆ. ಪ್ರಸಕ್ತ 55 ವರ್ಷದ ಟೆಲ್ಲಿಸ್ ಅವರು ವಾಷಿಂಗ್ಟನ್ ನಗರದಲ್ಲಿರುವ ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್ ನ್ಯಾಷನಲ್ ಪೀಸ್ ಇಲ್ಲಿ ಸೀನಿಯರ್ ಫೆಲ್ಲೊ ಆಗಿದ್ದಾರಲ್ಲದೆ ಅವರು ತಮ್ಮ  ಪದವಿ ಹಾಗೂ ಸ್ನಾತ್ತಕೋತ್ತರ ಪದವಿಯನ್ನು ಮುಂಬೈ ವಿಶ್ವವಿದ್ಯಾನಿಯದಿಂದ ಪಡೆದವರಾಗಿದ್ಧಾರೆ. ಈ ಹಿಂದೆ ಅವರು  ಅಮೆರಿಕಾದ ಭಾರತ ರಾಯಭಾರಿಯ ಹಿರಿಯ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಏಷ್ಯಾದ ಪ್ರಮುಖರನ್ನು ರಾಯಭಾರಿ ಹುದ್ದೆಗಳಿಗೆ ತರುವಲ್ಲಿ ನಿಯೋಜಿತ ಅಧ್ಯಕ್ಷ ಟ್ರಂಪ್ ತೀವ್ರ ಆಸಕ್ತಿ ವಹಿಸಿದ್ದಾರೆಂದು ಹೇಳಲಾಗುತ್ತಿದೆ.