ಸ್ಮಿತ್, ರಹಾನೆ ಬ್ಯಾಟಿಂಗ್ ಆರ್ಭಟಕ್ಕೆ ಕಂಗಾಲಾದ ಮುಂಬೈ ಇಂಡಿಯನ್ಸ್

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಪುಣೆ : ಹೊಸ ನಾಯಕ ಸ್ಟೀವನ್ ಸ್ಮಿತ್ ಹಾಗೂ ಅಜಿಂಕ್ಯ ರಹಾನೆ ಅವರ ಬ್ಯಾಟಿಂಗ್ ಅಬ್ಬರಕ್ಕೆ ಮುಂಬೈ ಇಂಡಿಯನ್ಸ್ ಬೆಚ್ಚಿಬಿದ್ದಿದೆ. ಹೊಸ ಸವಾಲಿಗೆ ಎದೆಯೊಡ್ಡಿದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ  ತನ್ನ ಮೊದಲ ಪಂದ್ಯದಲ್ಲೇ  ಭರ್ಜರಿ ಜಯ ಗಳಿಸಿದೆ.

ಕಳೆದ ಸೀಸನ್ನಿನಿಂದ ಐಪಿಎಲ್ ಪಂದ್ಯಾವಳಿಯಲ್ಲಿ ಆಡುತ್ತಿರುವ ರೈಸಿಂಗ್ ಪುಣೆ ತಂಡ ಕಳೆದ ಬಾರಿ 7ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ, ಈ ಬಾರಿ ಮೊದಲ ಪಂದ್ಯದಲ್ಲಿ ಪುಣೆ ತಂಡವು 7 ವಿಕೆಟ್ ಅಂತರದ  ಅಮೋಘ  ಗೆಲುವನ್ನು ಪಡೆದುಕೊಂಡಿದೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ  ಪುಣೆ ಆಟಗಾರರು ಮುಂಬೈ ತಂಡದ ಎಲ್ಲಾ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದ್ದಾರೆ.

ಮಾಜಿ ನಾಯಕ ಎಂ ಸ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ ಅವರಿÁರಿ ಪುಣೆ ತಂಡದ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು. ತನಗೆ ನೀಡಿದ ಹೊಸ ಜವಾಬ್ದಾರಿಯನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಿದ ಸ್ಮಿತ್ ನಾಯಕನ ಆಟವಾಡಿ ತಂಡವನ್ನು  ಗೆಲುವಿನ ದಡ ಸೇರಿದರು. 54 ಎಸೆತಗಳನ್ನು ಎದುರಿಸಿದ ಸ್ಮಿತ್ 3 ಸಿಕ್ಸರ್, 7 ಬೌಂಡರಿಗಳ ನೇರವಿನಿಂದ ಅಜೇಯ 84 ರನ್ ಬಾರಿಸಿದರು.

ಮುಂಬೈ ತಂಡದ 184 ರನ್ ಮೊತ್ತವನ್ನು  ಚೇಸ್ ಮಾಡುವಲ್ಲಿ ಪುಣೆ ತಂಡದ ಆರಂಭಿಕ ದಾಂಡಿಗ ಅಜಿಂಕ್ಯ ರಹಾನೆ ಪಾಲು ಇದೆ. 34 ಎಸೆತಗಳಲ್ಲಿ ರಹಾನೆ 60 ರನ್ ಸಿಡಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡವು   ಜೊಸ್ ಬಟ್ಲರ್  (38ರನ್),  ನಿತೇಶ್ ರಾಣಾ (34ರನ್) ಹಾಗೂ ಹಾರ್ದಿಕ್ ಪಾಂಡ್ಯಾ (35ರನ್) ಅವರ ಉಪಯುಕ್ತ ಬ್ಯಾಟಿಂಗ್ ನಿಂದ 20 ಓವರುಗಲ್ಲಿ 8 ವಿಕೆಟ್ಟಿರನ್ ಗಳಿಸಿತು.

ಚಚ್ಚಿಸಿ ಕೊಂಡ ದಿಂಡಾ

ಬಲಗೈ ಮಧ್ಯಮ ವೇಗಿ ಅಶೋಕ್ ದಿಂಡಾ ಈ ಪಂದ್ಯದಲ್ಲಿ ರೈಸಿಂಗ್ ಪುಣೆ ತಂಡದ ಪರ 20ನೇ ಓವರ್ ಎಸೆದರು. ಮುಂಬೈ ಪರ ಹಾರ್ದಿಕ್ ಪಾಂಡ್ಯಾ ಭರ್ಜರಿ ಆಟವಾಡಿ ಈ ಕೊನೆಯ  ಓವರಿನಲ್ಲಿ 30 ರನ್  ಹೊಡೆದರು. ದಿಂಡಾ ನೀಡಿದ 30 ರನ್  ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ದುಬಾರಿ 20ನೇ ಓವರ್ ಎಂಬ ದಾಖಲೆಗೆ ಕಾರಣವಾಯಿತು.

ಸ್ಮಿತ್ ಪಂದ್ಯಶ್ರೇಷ್ಠ

ಅಂತೂ ಒಂದು ಸ್ಪರ್ಧಾತ್ಮಕ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವು ಆರಂಭಿಕ ಪಂದ್ಯದಲ್ಲೇ ಗೆಲುವಿನ ನಗೆಯನ್ನು ಬೀರಿದೆ. ಗೆಲುವಿನ ಆಟಕ್ಕೆ  ಕಾರಣರಾದ ಸ್ಟೀವನ್ ಸ್ಮಿತ್ ಪಂದ್ಯಶ್ರೇಷ್ಠ  ಪ್ರಶಸ್ತಿಯಿಂದ  ಪುರಸ್ಕೃತರಾದರು.

ಇಂದಿನ ಪಂದ್ಯ : ಗುಜರಾತ್ ಲಯನ್ಸ್  ವರ್ಸಸ್ ಕೋಲ್ಕತಾ ನೈಟ್ ರೈಡರ್ಸ್