ಪೊಲ್ಲಾರ್ಡ್ ಆರ್ಭಟಕ್ಕೆ ಬೆಂಗಳೂರು ಪಲ್ಟಿ ಪುಣೆ ವಿರುದ್ಧ ಗುಜರಾತ್ ಲಯನ್ಸ್ ಜಯ

  • ಜಗದೀಶ್ಚಂದ್ರ ಅಂಚನ್

ಶುಕ್ರವಾರ ಗುಡ್ ಫ್ರೈಡೇ ಪ್ರಯುಕ್ತ ರಜಾದಿನ. ಈ ರಜೆಯಂದು ಕ್ರಿಕೆಟ್ ಪ್ರೇಮಿಗಳಿಗೆ ಡಬ್ಬಲ್ ಧಮಾಕ. ಐಪಿಎಲ್ ಟೂರ್ನಿಯ ಎರಡು ಪಂದ್ಯಗಳು ಶುಕ್ರವಾರ  ನಡೆದ ಕಾರಣ ಕ್ರಿಕೆಟ್ ಪ್ರೇಮಿಗಳು ಫುಲ್ ಖುಷಿ ಪಟ್ಟರು. ಐಪಿಎಲ್ ಮೊದಲೇ ಮೋಜು – ಮಸ್ತಿನಾಟ. ಹಾಗಾಗಿ ಈ ಎರಡು ಪಂದ್ಯಗಳು ಒಂದು ರೀತಿ ಸ್ಪರ್ಧಾತ್ಮಕತೆಯಲ್ಲಿ ಅಂತ್ಯ ಕಂಡಿವೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಂತೂ  ಗೆಲುವಿನ ದಡದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನ್ನು ಕಂಡರೆ, ರಾಜ್ ಕೋಟ್ ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ  ಗುಜರಾತ್  ಲಯನ್ಸ್ ಭರ್ಜರಿ ಜಯ ಪಡೆದುಕೊಂಡಿದೆ.

 

ಈ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸಾಧನೆ ದಾಖಲಾಗಿರುವುದು ಮತ್ತೊಂದು ವಿಶೇಷ. ಆರ್ ಸಿ ಬಿ ಪರ ವೆಸ್ಟ್ ಇಂಡೀಸಿನ ಲೆಗ್ ಸ್ಪಿನ್ನರ್ ಸ್ಯಾಮುವೆಲ್ ಬದ್ರಿ ಮುಂಬೈ ಇಂಡಿಯನ್ಸ್ ವಿರುದ್ಧ ಹಾಗೂ ಗುಜರಾತ್ ಲಯನ್ಸ್ ಪರ ಮೊದಲ ಪಂದ್ಯ ಆಡಿದ ಆಸ್ಟ್ರೇಲಿಯಾದ ವೇಗಿ ಆಂಡ್ರ್ಯೂ ಟೈ  ಪುಣೆ ತಂಡದ ಆಟಗಾರರನ್ನು ನಡುಗಿಸಿ ಹ್ಯಾಟ್ರಿಕ್ ಸಾಧನೆ ಗೈದರು.

ಬೆಂಗಳೂರುನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ  ಆರ್ ಸಿ ಬಿ ಸಾಧಾರಣ ಮೊತ್ತವನ್ನು ಗಳಿಸಿದರೂ ಕೂಡ  ಸ್ಪಿನ್ನರ್ ಸ್ಯಾಮುವೆಲ್ ಬದ್ರಿ ಅವರ ಮ್ಯಾಜಿಕ್ ಸ್ಪೆಲ್ ಮುಂಬೈ ಆಟಗಾರರನ್ನು ಬೆದರಿಸಿತು.

ನಾಯಕ ವಿರಾಟ್ ಕೊಹ್ಲಿ ಅವರ ಅದ್ಭುತವಾದ  (62 ರನ್) ಆಟದ ಹೊರತಾಗಿಯೂ  ಆರ್ ಸಿ ಬಿ ತಂಡ ಗಳಿಸಿದ್ದು 142ರನ್ನುಗಳನ್ನು. ಈ ಸಾಧಾರಣ ಮೊತ್ತವನ್ನು ಬೆಂಬತ್ತಿದ ಮುಂಬೈ ಇಂಡಿಯನ್ಸಗೆ ಖಂಡಿತವಾಗಿಯೂ ಇದು ಸುಲಭದ ತುತ್ತಾಗಿತ್ತು. ಆದರೆ, ಸ್ಯಾಮುವೆಲ್ ಬದ್ರಿ ಸತತ ಮೂರು ಎಸೆತಗಳಲ್ಲಿ ಪಾರ್ಥಿವ್ ಪಟೇಲ್, ರೋಹಿತ್ ಶರ್ಮ ಹಾಗೂ ಮಿಚೆಲ್ ಮೆಕ್ಲೆನಗನ್ ಅವರುಗಳ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆಗೈದರು. ಇವರು ಕೇವಲ 9 ರನ್ ನೀಡಿ 4 ವಿಕೆಟ್ ಕಬಳಿಸಿರು. ಮುಂಬೈ ಈ ಹಂತದಲ್ಲಿ 33 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಈ ಹಂತದಲ್ಲಿ ಮುಂಬೈ ತಂಡವನ್ನು ಆಧರಿಸಿದವರು ಕಿರಾನ್ ಫೆÇಲ್ಲಾರ್ಡ್ ಮತ್ತು ಕೃನಾಲ್ ಪಾಂಡ್ಯಾ. ಇವರಿಬ್ಬರು 6ನೇ ವಿಕೆಟಿಗೆ 93 ರನ್ ಸೇರಿಸಿ ಮುಂಬೈ ತಂಡಕ್ಕೆ ಗೆಲುವಿನ ಹಾದಿ ತೋರಿಸಿದರು. ಪೆÇಲ್ಲಾರ್ಡ್ 5 ಸಿಕ್ಸರ್, 3 ಬೌಂಡರಿಗಳ 70 ರನ್ ಬಾರಿಸಿ ಗೆಲುವಿನ ರೂವಾರಿಯಾದರು. ಇವರಿಗೆ ಸಾಥ್ ನೀಡಿದ ಕೃನಾಲ್ 37 ರನ್ ಗಳಿಸಿದರು. ಈ ಪಂದ್ಯವನ್ನು  ಮುಂಬೈ ಇಂಡಿಯನ್ಸ್  ಏಳು ಎಸೆತಗಳು ಬಾಕಿ ಇರುವಾಗಲೇ ನಾಲ್ಕು ವಿಕೆಟ್ ಗಳಿಂದ ಗೆದ್ಧುಕೊಂಡಿತು.  ಪೆÇಲ್ಲಾರ್ಡ್ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು. ರಾಜಕೋಟದಲ್ಲಿ ನಡೆದ ಪಂದ್ಯದಲ್ಲಿ ವೇಗಿ ಆಂಡ್ರ್ಯೂ ಟೈ  ಅವರ ಹ್ಯಾಟ್ರಿಕ್ ನೆರವಿನಿಂದ ಗುಜರಾತ್ ಲಯನ್ಸ್ ತಂಡವು ರೈಸಿಂಗ್ ಪುಣೆ ತಂಡವನ್ನು 171 (8 ವಿಕೆಟ್ ನಷ್ಟಕ್ಕೆ)ರನ್ನಿಗೆ ನಿಯಂತ್ರಿಸಿತು. ಉರಿ ದಾಳಿ ನಡೆಸಿದ ಆಂಡ್ರ್ಯೂ ಟೈ 17 ರನ್ನಿಗೆ 5 ವಿಕೆಟ್ ಉರುಳಿಸಿದರು. ನಾಯಕ ಸ್ಟೀವ್ ಸ್ಮಿತ್ 43 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್.

ಗುಜರಾತ್ ಲಯನ್ಸ್  ಜಯ ಗಳಿಸಲು 172 ರನ್ ಟಾರ್ಗೆಟನ್ನು ಸುಲಭವಾಗಿ ಬೆನ್ನತ್ತಿದೆ. ಬ್ರೆಂಡನ್ ಮೆಕ್ಲಲಂ (49 ರನ್), ಡ್ವೇನ್ ಸ್ಮಿತ್ (47 ರನ್), ನಾಯಕ  ಸುರೇಶ್ ರೈನಾ (35 ರನ್) ಹಾಗೂ ಆರೆನ್ ಫಿಂಚ್ (33 ರನ್) ಅವರುಗಳ ಸಮಯೋಚಿತ ಆಟದಿಂದ ಗುಜರಾತ್ ಲಯನ್ಸ್ ಇನ್ನೂ ಎರಡು ಓವರುಗಳು ಬಾಕಿ ಇರುವಾಗಲೇ ಏಳು ವಿಕೆಟುಗಳ  ಭರ್ಜರಿ ಗೆಲುವು ಪಡೆಯಿತು. ಮಾರಕ ಬೌಲಿಂಗ್ ನಡೆಸಿದ ಆಂಡ್ರ್ಯೂ ಟೈ ಪಂದ್ಯಶ್ರೇಷ್ಠ ಪ್ರಶಸ್ತಿ ಗೆ ಪಾತ್ರರಾದರು.

 

ಇಂದಿನ ಮುಖಾಮುಖಿ

ಸಂಜೆ: 4.00 ಗಂಟೆಗೆ

ಕೋಲ್ಕತ್ತಾ ನೈಟ್ ರೈಡರ್ಸ್

ವರ್ಸಸ್

ಸನ್ ರೈಸರ್ಸ್ ಹೈದರಾಬಾದ್

………………

 ರಾತ್ರಿ: 8.00 ಗಂಟೆಗೆ

ಡೆಲ್ಲಿ ಡೇರ್ ಡೆವಿಲ್ಸ್

ವರ್ಸಸ್

ಕಿಂಗ್ಸ್ ಇಲೆವೆನ್ ಪಂಜಾಬ್