ಕೈಗಾದಿಂದ ಅಣುತ್ಯಾಜ್ಯ ಒಯ್ಯಬೇಕಿದ್ದ ಬೃಹತ್ ಬಹುಚಕ್ರ ವಾಹನ ಅಪಘಾತ

ತಪ್ಪಿದ ಶತಮಾನದ ಮಹಾದುರಂತ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿಗೆ ಸಮೀಪದ ಕೈಗಾ ಅಣುವಿದ್ಯುತ್ ಸ್ಥಾವರದಿಂದ ತಮಿಳುನಾಡಿನ ಕಲ್ಪಕಮ್ ಅಣುವಿದ್ಯುತ್ ಸ್ಥಾವರಕ್ಕೆ ಅಣುತ್ಯಾಜ್ಯ (ಸ್ಪೆಂಟ್ ಫ್ಯೂಯಲ್) ಕೊಂಡೊಯ್ಯಲು ಕೈಗಾದತ್ತ ಹೋಗುತ್ತಿದ್ದ ಬಹುಚಕ್ರ ವಾಹನದ ಟ್ರಾಲಿಯೊಂದು ಕಾರವಾರದ ವೈಲವಾಡಾದ ನೈತಿಸಾವರ್ ಬಳಿ ಅಪಘಾತಕ್ಕೀಡಾಗಿದೆ.

ಸೋಮವಾರ ಅತ್ಯಂತ ಭದ್ರತೆಯಲ್ಲಿ ಎರಡು ಬೃಹತ್ ಲಾರಿಗಳಲ್ಲಿ ಬೃಹತ್ ಗಾತ್ರದ ಟ್ಯಾಂಕುಗಳನ್ನು ಕೈಗಾದತ್ತ ಕೊಂಡೊಯ್ಯಲಾಗುತ್ತಿತ್ತು. ಅಪಘಾತದ ವೇಳೆಯಲ್ಲಿ ಈ ಟ್ಯಾಂಕಗಳು ಖಾಲಿ ಇದ್ದ ಹಿನ್ನೆಲೆಯಲ್ಲಿ ಭಾರಿ ಅವಘಡವೊಂದು ತಪ್ಪಿದೆ. ಅಕಸ್ಮಾತ್ ಕೈಗಾದಿಂದ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿ ಅಣುತ್ಯಾಜ್ಯವೇನಾದರೂ ವಾತಾವರಣದಲ್ಲಿ ಮಿಶ್ರಿತವಾದರೆ ಊಹಿಸಲು ಸಾಧ್ಯವಾದ ಅವಘಡಕ್ಕೂ ಕಾರಣವಾಗಬಹುದಿತ್ತು ಎಂದು ತಿಳಿದುಬಂದಿದೆ.

ಕಾರವಾರ ನಗರದ ಜನನಿಬಿಡ ಪ್ರದೇಶದಿಂದ ಮಧ್ಯಾನ್ಯ ಕೈಗಾದತ್ತ ಪ್ರಯಾಣ ಬೆಳೆಸಿದ್ದ ಈ ಬೃಹತ್ ವಾಹನಗಳಲ್ಲಿ ಒಂದು ವೈಲವಾಡಾದ ನೈತಿಸಾವರದ ತಿರುವಿನ ಪ್ರದೇಶದಲ್ಲಿ ರಸ್ತೆಯಿಂದ ಕೆಳಗೆ ಜಾರಿ ಹೊಂಡದಲ್ಲಿ ಬಿದ್ದಿದೆ. ಅತ್ಯಂತ ಕಡಿದಾದ ಹಾಗೂ ತಿರುಮುರುವಿನ ಈ ರಸ್ತೆ ಅಪಾಯಕಾರಿಯಾಗಿದ್ದರೂ ಇಂತಹ ಅಪಾಯಕಾರಿ ಅಣುತ್ಯಾಜ್ಯವನ್ನು ಈ ರಸ್ತೆಯಿಂದಲೇ ಅಣುವಿದ್ಯುತ್ ನಿಗಮದವರು ಸಾಗಿಸುತ್ತಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬೃಹತ್ ಲಾರಿಗಳಿಗೆ ಸ್ಥಳೀಯ ಪೆÇಲೀಸರಲ್ಲದೇ ಮಿಲಿಟರಿ ಜವಾನರೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಕಾವಲಿದ್ದು, ಅದನ್ನು ಉತ್ತರ ಕನ್ನಡದ ಗಡಿಯಿಂದ ಬಿಗಿ ಬಂದೋಬಸ್ತಿನಲ್ಲಿ ಪೆÇಲೀಸ್ ಹಾಗೂ ಸೈನಿಕರ ಸೈರನ್ ಹೊಂದಿದ ವಾಹನಗಳು ಕೈಗಾದತ್ತ ಸಾಗಿಸುತ್ತಿದ್ದವು. ಈ ವಾಹನಗಳ ಫೆÇೀಟೋ ತೆಗೆಯಲು ಯತ್ನಿಸಿದಾಗ ಅದರ ಭದ್ರತೆಗಿದ್ದ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ಫೆÇೀಟೊಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾರೆ.

ಕಾರವಾರದಿಂದ ಸೋಮವಾರ ಹೊರಟ ಈ ವಾಹನಗಳು ನತಿಸಾವರವನ್ನು ತಲುಪಲು ಹೆಚ್ಚು ಕಡಿಮೆ 6 ಗಂಟೆಯ ಅವಧಿಯನ್ನು ತೆಗೆದುಕೊಂಡಿವೆ. ಇವು ಸಾಗಾಟಮಾಡುವ ಅಣು ಬೂದಿ ಅತ್ಯಂತ ಅಪಾಯಕಾರಿ ವಸ್ತುವಾಗಿದ್ದು, ಅದರಲ್ಲಿನ ಒಂದು ಗ್ರಾಂ ತೂಕದ ಯುರೇನಿಯಂ-238 ನ ಅಣುಬೂದಿ ವಾತಾವರಣವನ್ನು ಸೇರಿದರೂ ಅದರ ತೂಕ ಅರ್ಧ ಗ್ರಾಂ ಗೆ ಇಳಿಯಲು (ವೈಜ್ಞಾನಿಕ ಭಾಷೆಯಲ್ಲಿ ಹಾಫ್ ಲೈಫ ಎಂದು ಕರೆಯಲಾಗುತ್ತದೆ) ಅದು ಹೆಚ್ಚುಕಡಿಮೆ 4.5 ಬಿಲಿಯನ್ ವರ್ಷಗಳ ಕಾಲ ವಾತಾವರಣದಲ್ಲಿ ಅಣುವಿಕಿರಣವನ್ನು ಸೋರಿಕೆ ಮಾಡುತ್ತಿರುತ್ತದೆ. ಹೀಗಾಗಿ ಇದನ್ನು ಅತ್ಯಂತ ಭದ್ರತೆಯಲ್ಲಿ ಕೊಂಡೊಯ್ಯಲಾಗುತ್ತದೆ ಎಂದು ತಿಳಿದುಬಂದಿದೆ. ಅಲ್ಲದೇ ಅಕಸ್ಮಾತ್ ಇದು ಎನ್ರಿಚ್ ಮಾಡಿದ ಯುರೆನಿಯಂ ಆಗಿದ್ದರೆ ಅದನ್ನು ಯಾವುದಾರೂ ಸೈನಿಕ ನೆಲೆಗೆ ತಲುಪಿಸಲಾಗುತ್ತಿದೆ. ಎನ್ರಿಚ್ ಮಾಡಿದ ಯುರೆನಿಯಂನಿಂದ ಅಣು ಬಾಂಬನ್ನು ತಯಾರಿಸಲಾಗುವುದು. ಆದರೆ ಕೈಗಾ ಅಣುವಿದ್ಯುತ್ ಸ್ಥಾವರವು ಎನ್ರಿಚ್ ಮಾಡಿದ ಯುರೆನಿಯಂನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಅಂತಾರಾಷ್ಟ್ರೀಯ ಒಪ್ಪಂದದ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆಗೆ ಬೇಕಾದ ಅಣುಶಕ್ತಿ ಬಳಕೆ ಹೊರತುಪಡಿಸಿ ಮಿಲಿಟರಿ ಉದ್ದೇಶ ಅಂದರೆ ಅಣುಬಾಂಬ್ ತಯಾರಿಸಲು ಬೇಕಾದ ಎನ್ರಿಚ್ ಮಾಡಿದ ಯುರೆನಿಯಂನ್ನು ತಯಾರಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಹೀಗಾಗಿ ಅಣುಶಕ್ತಿ ಸ್ಥಾವರದಲ್ಲಿ ಅಣುವಿದಳನ ಕ್ರಿಯೆಯ ನಂತರ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಕುಡಕುಲಂ ಹಾಗೂ ಕಲ್ಬಕಂನಂತಹ ಅಣುಸ್ಥಾವರಗಳಲ್ಲಿ ಮರುಬಳಕೆ ಮಾಡಲಾಗುತ್ತದೆ ಅಥವಾ ಅತ್ಯಂತ ಬಲವಾದ ಸೀಸದ ಟ್ಯಾಂಕಗಳಲ್ಲಿ ಇಟ್ಟು ಆತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಭೂಕಂಪವಾಗದ ಪ್ರದೇಶಗಳಲ್ಲಿ ಭೂಮಿಯಲ್ಲಿ ಹುಗಿಯಲಾಗುತ್ತಿದೆ. ಕೈಗಾದಲ್ಲಿ ಉತ್ಪತ್ತಿಯಾದ ಈ ತ್ಯಾಜ್ಯವನ್ನು ಅಜ್ಞಾತ ಸ್ಥಳವೊಂದಕ್ಕೆ ಬಿಗಿ ಭದ್ರತೆಯೊಂದಿಗೆ ಸಾಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸೋಮವಾರ ಈ ವಾಹನ ವೈಲ್‍ವಾಡದ ನೈತಿಸಾವರದ ತಿರುವು ಪ್ರದೇಶದಲ್ಲಿ ಸಾಗುತ್ತಿದ್ದಾಗ ಹಿಂದಿನ ಟ್ರಾಲಿಯ ಉದ್ದ ಹೆಚ್ಚಾಗಿದ್ದ ಕಾರಣದಿಂದ ಅದು ರಸ್ತೆಯಿಂದ ಕೆಳಕ್ಕೆ ಇಳಿದು ಹೊಂಡಕ್ಕೆ ಜಾರಿದೆ. ಆನಂತರ ಅದನ್ನು ಮೇಲೆತ್ತಲಾಗದೇ ಸಿಬ್ಬಂದಿ ಪರದಾಡಿದ್ದಾರೆ. ವಿಷಯ ತಿಳಿಯಿತ್ತಿದ್ದಂತೆ ಕೈಗಾದಿಂದ ಸಿಐಎಸ್‍ಎಫ್ ಸಿಬ್ಬಂದಿ ಜೆಸಿಬಿ ಹಾಗೂ ಇತರ ಪರಿಕರಗಳೊಂದಿಗೆ ಅಪಘಾತ ನಡೆದ ಸ್ಥಳದತ್ತ ಧಾವಿಸಿದ್ದಾರೆ. ತಡರಾತ್ರಿಯವರೆಗೆ ಪ್ರಯತ್ನ ಪಟ್ಟರೂ ಈ ಟ್ರಾಲಿಯನ್ನು ಮೇಲಕ್ಕೆತ್ತಲು ಸಾಧ್ಯವಾಗಿಲ್ಲ.

ಈ ಘಟನೆಯಿಂದ ಕೈಗಾ ಹಾಗೂ ಕಾರವಾರ ನಡುವಿನ ವಾಹನಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಅಲ್ಲದೇ ಕೈಗಾ ಹಾಗೂ ಕಾರವಾರದ ನಡುವಿನ ತಿರುವು ಮುರುವಾದ ರಸ್ತೆಯನ್ನು ಅಗಲಿಕರಣಗೊಳಿಸಿ ನೇರವಾಗಿಸಬೇಕು ಎಂಬ ಸಾರ್ವಜನಿಕರ ಒತ್ತಾಯಕ್ಕೆ ಈ ಘಟನೆ ಇಂಬು ನೀಡಿದೆ.