ಶೇಣಿ ಶಾಲೆಯಲ್ಲಿ ಮಲ್ಟಿಮೀಡಿಯಾ ಕಟ್ಟಡಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇರಳ ಸರಕಾರವು ರಾಜ್ಯದ ವಿವಿಧ ಶಾಲೆಗಳ 45 ಸಾವಿರ ತರಗತಿಗಳನ್ನು ಮಲ್ಟಿಮೀಡಿಯಾ ತರಗತಿಗಳಾಗಿ ಮೇಲ್ದರ್ಜೆಗೇರಿಸಲು ಈ ವರ್ಷ ಶಿಕ್ಷಣ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗವು ಕಾರ್ಯಯೋಜನೆ ಜಾರಿಗೊಳಿಸುತ್ತಿದೆ. ಪ್ರತಿ ಶಾಲೆಯಲ್ಲಿ ಒಂಬತ್ತು ತರಗತಿಯನ್ನು ಈ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಿ ಉನ್ನತ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಆಧುನಿಕ ಸೌಲಭ್ಯದ ಶಿಕ್ಷಣ ನೀಡಲಾಗುತ್ತದೆ. ಹೈಸ್ಕೂಲು ವಿಭಾಗದ 8ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ಇಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ಗಣಕಯಂತ್ರಗಳು, ಪೆÇ್ರಜೆಕ್ಟರ್, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಹೈಸ್ಪೀಡ್ ಇಂಟರ್ನೆಟ್ ವ್ಯವಸ್ಥೆಗಳಿದ್ದು, ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ತರಬೇತುಗೊಂಡ ಶಿಕ್ಷಕರು ತರಗತಿ ನಡೆಸುತ್ತಾರೆ.

ಈ ನಿಟ್ಟಿನಲ್ಲಿ ಶೇಣಿ ಶ್ರೀ ಶಾರದಾಂಬ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಒದಗಿಸಿದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಡಿಸೆಂಬರ್ 7ಕ್ಕೆ ನಡೆಯಲಿದೆ. ಕರ್ನಾಟಕ ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಮಾನಾಥ ರೈ ಮಲ್ಟಿಮೀಡಿಯಾ ಸೌಲಭ್ಯಕ್ಕೆ ಚಾಲನೆ ನೀಡಲಿದ್ದಾರೆ.

 

LEAVE A REPLY