ಕೈಕೊಡುವ ಮುಲ್ಕಿ ಪೊಲೀಸ್ ಜೀಪು

ಪೊಲೀಸ್ ಜೀಪನ್ನು ಟ್ರ್ಯಾಕ್ಟರ್ ಮೂಲಕ ಎಳೆಯುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಮುಲ್ಕಿ ಠಾಣೆಯ ಪೊಲೀಸ್ ಜೀಪು ಆಗಾಗ್ಗೆ ಕೈಕೊಡುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಭಾನುವಾರವೂ ಮುಲ್ಕಿ ಬಸ್ ನಿಲ್ದಾಣದ ಬಳಿ ಠಾಣೆಯ ಜೀಪು ಹಾಳಾಗಿ, ಬಳಿಕ ಟ್ರಾಕ್ಟರ್ ಮೂಲಕ ಎಳೆದುಕೊಂಡು ಠಾಣೆಯ ಬಳಿ ತಂದಿಡಲಾಗಿದೆ.

ಪ್ರಸ್ತುತ ಮುಲ್ಕಿ ಠಾಣೆಯಲ್ಲಿ ಎರಡು ಜೀಪುಗಳಿದ್ದು, ಒಂದನ್ನು ಸರ್ಕಲ್ ಇನಸ್ಪೆÉಕ್ಟರ್ ಉಪಯೋಗಿಸುತ್ತಿದ್ದಾರೆ. ಅದು ಸಾದಾರಾಣ ಮಟ್ಟಿಗೆ ಸರಿ ಇದೆ. ಆದರೆ ಇನ್ನೊಂದು ಮಾತ್ರ ಓಬಿರಾಯನ ಕಾಲದ ಜೀಪು ಆಗಾಗ್ಗೆ ಹಾಳಾಗುತ್ತಿದ್ದು, ಪೊಲೀಸರಿಗೆ ಮುಜುಗರ ಸೃಷ್ಠಿಸುತ್ತಿದೆ. ಕೆಲ ವರ್ಷಗಳ ಹಿಂದೆ ಠಾಣೆಯ ಇಂಟರಸೆಪ್ಟರ್ ಜೀಪು ಪಣಂಬೂರಿನಲ್ಲಿ ನಡೆದ ಅಪಘಾತದ ಬಳಿಕ ಮುಲ್ಕಿಗೆ ಹೊಸ ಜೀಪು ಮರೀಚಿಕೆಯಾಗಿದೆ. ಹಳೆ ಜೀಪಿನಲ್ಲಿ ಕಳ್ಳರನ್ನು ಹಿಡಿಯಲು ಹೊರಟರೆ ಕಳ್ಳರು ಪರಾರಿಯಾಗುವುದಂತೂ ಖಚಿತವಾಗಿದೆ. ಕೂಡಲೇ ಮುಲ್ಕಿ ಠಾಣೆಗೆ ಹೊಸ ಜೀಪು ಮಂಜೂರು ಮಾಡುವಂತೆ ಮುಲ್ಕಿ ನಾಗರಿಕರು ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದಾರೆ.