ಸೂಚನೆ ನೀಡದೆ ಬಡವರ ಮನೆಯ ಫ್ಯೂಸ್ ತೆಗೆಯುವ ಮುಲ್ಕಿ ಮೆಸ್ಕಾಂ

ಇತ್ತೀಚೆಗೆ ಇಬ್ಬರು ಮೆಸ್ಕಾಂ ಲೈನನ್‍ಮನ್ನರು ಮನೆಗೆ ಬಂದು  ನೀವು ಒಂದು ತಿಂಗಳ ಬಿಲ್ ಕಟ್ಟಿಲ್ಲ  ಎಂದು ಹೇಳಿ ಫ್ಯೂಸ್ ತೆಗೆದುಕೊಂಡು ಹೋದರು.  ನಾವು 10 ದಿನ ಮನೆಯಲ್ಲಿ ಇರಲಿಲ್ಲ, ಈಗಷ್ಟೇ ಬಂದಿದ್ದೇವೆ  ಈಗಲೇ ಹೋಗಿ ಬಿಲ್ ಕಟ್ಟುತ್ತೇವೆ  ಎಂದು ಎಷ್ಟು ವಿನಂತಿಸಿದರೂ ಕೇಳದೆ ಅವರು ಫ್ಯೂಸನ್ನು ತೆಗೆದುಕೊಂಡು ಹೋಗಿಯೇಬಿಟ್ಟರು
ಆ ದಿನ ಶನಿವಾರ  ನಾನು ಬಿಲ್ ಕಟ್ಟಲು ಓಡಿದಾಗ ಮುಲ್ಕಿ ಮೆಸ್ಕಾಂ ವಿಭಾಗೀಯ ಕಚೇರಿಯ ಬಿಲ್ ಸ್ವೀಕಾರ ಕೌಂಟರ್ ಮುಚ್ಚಿತ್ತು  ಅಲ್ಲಿಗೆ ಆ ದಿನ ಕರಂಟ್ ಇಲ್ಲ ಎಂದಾಯಿತು  ಮಾರನೆ ದಿನ ಆದಿತ್ಯವಾರ  ಆ ದಿನವೂ ಕರೆಂಟ್ ಇಲ್ಲ  ಸೋಮವಾರ ಮುಲ್ಕಿಯಲ್ಲಿ ಬಿಲ್ ಕಟ್ಟಿದೆ  ಬಳಿಕ ಹಳೆಯಂಗಡಿಯ ಸಹಾಯಕ ಎಂಜಿನಿಯರಗೆ ಫೋನ್ ಮಾಡಿ ಎಂದು ಮುಲ್ಕಿಯಲ್ಲಿ ಹೇಳಿದರು  ಫೋನ್ ಮಾಡಿದೆ  ಒಂದು ಗಂಟೆಯಲ್ಲಿ ಬಂದು ಫ್ಯೂಸ್ ಹಾಕುತ್ತಾರೆ ಎಂಬ ಉತ್ತರ ಸಿಕ್ಕಿತು  ಆದರೆ ಗಂಟೆ 5 ಆದರೂ ಸುದ್ದಿಯಿಲ್ಲ  ಮತ್ತೊಮ್ಮೆ ಫೋನ್ ಮಾಡಿದೆ  ಕೊನೆಗೂ 6 ಗಂಟೆ ಹೊತ್ತಿಗೆ ಲೈನಮನ್ ಬಂದು ಫ್ಯೂಸ್ ಸಿಕ್ಕಿಸಿ ಹೋದರು  ಮೆಸ್ಕಾಂಗೆ ನಾನು ಕೇಳ ಬೇಕಾಗಿರುವ ಪ್ರಶ್ನೆಗಳು ಇಲ್ಲಿವೆ
1. ಒಂದು ತಿಂಗಳ ಬಿಲ್ ಬಾಕಿಯಿದ್ದು ಕಾರಣಾಂತರಗಳಿಂದ ಕಟ್ಟಲು ಸಾಧ್ಯವಾಗದಿದ್ದರೆ ಒಂದು ದಿನದ ಸೂಚನೆಯನ್ನೂ ನೀಡದೆ ನೀವು ವಿದ್ಯುತ್ ಸಂಪರ್ಕ ಕಡಿತ ಮಾಡುವಿರಾ  ಲಿಖಿತವಾಗಿಯಾಗಲಿ  ಫೋನ್ ಮೂಲಕವಾಗಲಿ  ಅಥವಾ ಮುಖತಃ ಕನಿಷ್ಠ ಒಂದು ದಿನದ ನೋಟಿಸ್ ನೀಡುವ ಸೌಜನ್ಯವೂ ನಿಮಗಿಲ್ಲವೇ
2. ಫ್ಯೂಸ್ ತೆಗೆದುಕೊಂಡು ಹೋಗುವಾಗ  ಇಂಥ ಕಾರಣಗಳಿಗಾಗಿ  ಇಂಥವರು ಇಂಥ ದಿನ ಫ್ಯೂಸ್ ತೆಗೆದುಕೊಂಡು ಹೋಗುತ್ತಿದ್ದಾರೆ  ಎನ್ನುವ ಸ್ವೀಕೃತಿ ಪತ್ರವನ್ನು ಯಾಕೆ ಕೊಡುವುದಿಲ್ಲ   ಯಾಕೆಂದರೆ ನಮಗೆ ಲೈನಮನ್ ಪರಿಚಯವೇ ಇರುವುದಿಲ್ಲ  ಈ ಬಗ್ಗೆ ನಾನು ಹಳೆಯಂಗಡಿ ಎಇ ಅವರಿಗೆ ಫೋನ್ ಮಾಡಿ ವಿಚಾರಿಸಿದೆ  ಮುನ್ನೆಚ್ಚರಿಕೆ ಕೊಡುವುದಾಗಲಿ  ಫ್ಯೂಸ್ ತೆಗೆದುಕೊಂಡು ಹೋಗಿರುವುದಕ್ಕೆ ಸ್ವೀಕೃತಿ ಪತ್ರ ಕೊಡುವ ಕ್ರಮವಾಗಲಿ ಮೆಸ್ಕಾಂನಲ್ಲಿ ಇಲ್ಲ ಎಂದು ಅವರು ಉತ್ತರಿಸಿದರು
ಹಾಗಾದರೆ  ಹೀಗೆ ಅನಧಿಕೃತವಾಗಿ ಯಾರು ಬೇಕಾದರೂ  ಮೆಸ್ಕಾಂನವರು ಎಂದು ಹೇಳಿಕೊಂಡು ಗುಜರಿಯವರು ಬಂದು ಮೀಟರನ್ನೇ ಕೊಂಡೋಗಬಹುದು  ನಾವು ಕೇಳುವಂತಿಲ!್ಲ  ಬಂದು ಫ್ಯೂಸ್ ತೆಗೆದುಕೊಂಡು ಹೋಗಬಹುದಲ್ಲವೇ  ಅಂಥ ಸಂದರ್ಭದಲ್ಲಿ ನೀವು ನಮ್ಮನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲವೇ   ಇಂಥ ವೃತ್ತಿಪರವಲ್ಲದ ಕ್ರಮಗಳನ್ನು ಪ್ರತಿಷ್ಠಿತ ಮೆಸ್ಕಾಂ ಅನುಸರಿಸಬೇಕೆ
3  ಬಿಲ್ ಕಟ್ಟಬಾರದು ಎಂಬ ಉದ್ದೇಶವಿಲ್ಲದೆ  ಯಾವುದೋ ಅನಿವಾರ್ಯ ಕಾರಣಗಳಿಂದಾಗಿ ಬಡವರ ಒಂದು ತಿಂಗಳ ಬಿಲ್ ಕಟ್ಟಲು ಬಾಕಿಯಾದರೆ ನೀವು ಒಂದು ದಿನದ ಸೂಚನೆಯನ್ನೂ ನೀಡದೆ ಫ್ಯೂಸ್ ತೆಗೆದುಕೊಂಡು ಹೋಗುತ್ತೀರಿ  ಆದರೆ  ಶ್ರೀಮಂತರ ಬಂಗಲೆಗಳಿಗೆ ಇದೇ ರೀತಿ ನುಗ್ಗಿ ಒಂದು ದಿನದ ಸೂಚನೆಯನ್ನೂ ನೀಡದೆ ನೀವು ಫ್ಯೂಸ್ ತೆಗೆದುಕೊಂಡು ಹೋಗುತ್ತೀರಾ   ನನಗೆ ಗೊತ್ತಿರುವಂತೆ ನೀವು ಹಾಗೆ ಮಾಡುವುದಿಲ್ಲ  ಹಲವು ಸೂಚನೆಗಳನ್ನು ಮುಂಚಿತವಾಗಿ ನೀಡುತ್ತೀರಿ  ನಿಮ್ಮ ಈ `ದಿಢೀರ್ ಫ್ಯೂಸ್ ತೆಗೆದುಕೊಂಡು ಹೋಗುವ ಸೇವೆ ಬಡವರಿಗೆ ಮಾತ್ರ ಮೀಸಲು
ಯಾಕೆಂದರೆ  ಅವರನ್ನು ಯಾರೂ ಕೇಳುವವರಿಲ್ಲ
ಅದೂ ಅಲ್ಲದೆ  ಉದ್ದೇಶಪೂರ್ವಕವಾಗಿ ಲಕ್ಷಾಂತರ ರೂಪಾಯಿ ಬಿಲ್ ಬಾಕಿಯಿಟ್ಟ ಬೃಹತ್ ಕಂಪೆನಿಗಳಿಗೆ ಹೀಗೆ ನುಗ್ಗಿ ಯಾವುದೇ ಸೂಚನೆ ನೀಡದೆ ಫ್ಯೂಸ್ ತೆಗೆದುಕೊಂಡು ಹೋಗುವಿರಾ  ನೀವು ಹಾಗೆ ಮಾಡುವುದಿಲ್ಲ   ಯಾಕೆಂದರೆ ಅವರು ನ್ಯಾಯಾಲಯಕ್ಕೆ ಹೋಗುತ್ತಾರೆ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯುವವರೆಗೂ ನೀವು ಅವರಿಗೆ ವಿದ್ಯುತ್ ಪೂರೈಕೆ ಮಾಡುತ್ತಲೇ ಇರುತ್ತೀರಿ  ಅವರು ಬಿಲ್ ಕಟ್ಟುವುದಿಲ್ಲ ಕೊನೆಗೆ ಎಷ್ಟೋ ವರ್ಷಗಳ ಬಳಿಕ ಒಂದು ಒಪ್ಪಂದಕ್ಕೆ ಬಂದು ಬಿಲ್ಲಿನಲ್ಲಿ ರಿಯಾಯಿತಿ ನೀಡುತ್ತೀರಿ
ಒಂದು ತಿಂಗಳ ಬಿಲ್ ಬಾಕಿಯಿದೆ ಎನ್ನುವ ಕಾರಣಕ್ಕೆ ಬಡವರಿಗೆ  ಕತ್ತಲ ಶಿಕ್ಷೆ ಯನ್ನು ಕೊಟ್ಟು ದೊಡ್ಡ ಸಾಧನೆ ಮಾಡಿದವರಂತೆ ಬೀಗಬೇಡಿ ಮುಂದೆಯಾದರೂ  ಫ್ಯೂಸ್ ತೆಗೆಯುವ ಮೊದಲು ಕನಿಷ್ಠ ಒಂದು ದಿನದ ಸೂಚನೆಯನ್ನಾದರೂ ನೀಡಿ  ಅದುವೇ ವೃತ್ತಿಪರ ಪ್ರಬುದ್ಧ ಸಂಸ್ಥೆಯ ಲಕ್ಷಣ  ಬಿಲ್ ಕಟ್ಟಬಾರದು ಎಂಬ ಉದ್ದೇಶ ನಮ್ಮಂಥ ಬಡವರಲ್ಲಿ ಯಾವತ್ತೂ ಇರುವುದಿಲ್ಲ

  • ವಿಕ್ಕಿ ಹಳೆಯಂಗಡಿ