ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಲೆ ಹಲ್ಲೆ

ಕರಾವಳಿ ಅಲೆ  ವರದಿ

ಮುಲ್ಕಿ : ಹಳೆ ದ್ವೇಷಕ್ಕೆ ಸಂಬಂಧಿಸಿದಂತೆ ಹಳೆಯಂಗಡಿ ಸಮೀಪದ ಸಾಗು ನಿವಾಸಿ ಆಶ್ರಫ್ ಎಂಬಾತ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಹಕೀಂ ಮತ್ತು ಅವರ ತಮ್ಮ ಫರಾನ್ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡ ಇಬ್ಬರು ಸುರತ್ಕಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳವಾರ ಬೆಳಗ್ಗೆ 11.30 ಗಂಟೆಗೆ ಮುಕ್ಕ ತೂಕದ ಬ್ರಿಡ್ಜ್ ಬಳಿ ಕೆಲಸದ ನಿಮಿತ್ತ ಬಂದಿದ್ದ ಅಬ್ದುಲ್ ಹಕೀಂ ಹಾಗೂ ತಮ್ಮ ಫರಾನ್ ಅವರನ್ನು ನೋಡಿ ಸ್ಥಳಕ್ಕೆ ಬಂದಿದ್ದ ಆಶ್ರಫ್ ಸಾಗ್ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಏಕಾಏಕಿ ಚೂರಿಯಿಂದ ಹಲ್ಲೆ ನಡೆಸಿದ್ದಾನೆ

ಹಾಗೂ ಅದನ್ನು ತಡೆಯಲು ಬಂದ ತಮ್ಮ ಫರಾನ್ ಕೆನ್ನೆಗೆ ಚೂರಿಯಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೂಡಲೇ ಸ್ಥಳೀಯರು ಇಬ್ಬರನ್ನು ಸುರತ್ಕಲ್ ಆಸ್ಪತ್ರೆಗೆ ದಾಖಲಿಸಿದ್ದು, ಸುರತ್ಕಲ್ ಪೋಲೀಸ್ ಠಾಣೆಯಲ್ಲಿ ಆರೋಪಿ ಆಶ್ರಫ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಆಶ್ರಪ್ ಕೂಲಿ ಕೆಲಸ ಮಾಡುತ್ತಿದ್ದು ಹಳೆ ದ್ವೇಷವೇ ಹಲ್ಲೆಗೆ ಕಾರಣ ಎಂದು ಶಂಕಿಸಲಾಗಿದೆ.

 

 

LEAVE A REPLY