ಸಂಪ್ರದಾಯ ವಿಧಿವಿಧಾನದೊಂದಿಗೆ ಮುಲ್ಕಿ ಅರಸು ಕಂಬಳ ಮುಕ್ತಾಯ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ನ್ಯಾಯಾಲಯ ಕಂಬಳಕ್ಕೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ ಜೋಡುಕರೆ ಅರಸು ಕಂಬಳ ಸಾಂಪ್ರದಾಯಿಕವಾಗಿ ಕೋಣಗಳನ್ನು ಓಡಿಸುವ ಮೂಲಕ ಮುಕ್ತಾಯಗೊಂಡಿತು.

ಪಡುಪಣಂಬೂರಿನ ಪುರಾತನ ಕಾಲದಿಂದಲೂ ಕಟ್ಟುಪಾಡಾಗಿ ಬೆಳೆದು ಬಂದ ಕಂಬಳ ಕ್ರೀಡೆ ಪ್ರಥಮ ಬಾರಿಗೆ ಸೀಮೆಯಲ್ಲಿ ನಿಂತು ಹೋದ ಬಗ್ಗೆ ಸ್ಥಳೀಯರಲ್ಲಿ ಬೇಸರದ ಭಾವನೆ ಮೂಡಿತ್ತು. ಮುಂದಿನ ದಿನಗಳಲ್ಲಾದರೂ ನ್ಯಾಯಾಲಯ ನಿಷೇಧ ಹಿಂಪಡೆಯುವ ಆಶಾಭಾವನೆ ಸಭೆ ವ್ಯಕ್ತಪಡಿಸಿತು.

ಅರಮನೆ ದುಗ್ಗಣ್ಣ ಸಾವಂತರಸರು ಮಾತನಾಡಿ, “ನ್ಯಾಯಾಲಯ ಕಂಬಳಕ್ಕೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಕೇವಲ ಸಾಂಪ್ರದಾಯಿಕ ಕಟ್ಟಲೆಯೊಂದಿಗೆÀ ಕಂಬಳ ಆಚರಿಸಿದ್ದೇವೆ” ಎಂದರು.

ಬಳಿಕ ಒಂಭತ್ತು ಮಾಗಣೆಗೊಳಪಟ್ಟ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕೆಸರುಗದ್ದೆ, ಹಗ್ಗಜಗ್ಗಾಟ ಸಹಿತ ವಿವಿಧ ಸ್ಪರ್ಧೆ ನಡೆದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನÀ ವಿತರಿಸಲಾಯಿತು.