ಮುದಾಸಿರ್ ಕೊಲೆಯತ್ನ ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾಟಿಪಳ್ಳ ನಿವಾಸಿ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಜನವರಿ 3ರಂದು ಮಂಗಳೂರು ನಿವಾಸಿ ಮುದಾಸಿರ್ ಎಂಬವರ ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಪಣಂಬೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹದ ಬಂಧಿಸಿದೆ.

ಸುರತ್ಕಲ್ ನಿವಾಸಿ ಯಶೋಧರ (20) ಮತ್ತು ಪ್ರೀತಂ ಅಲಿಯಾಸ್ ಗೌಡಪ್ಪ (20) ಬಂಧಿತರು.

ಜನವರಿ 3ರಂದು ಸುರತ್ಕಲ್ ಬಳಿ ನಿಂತಿದ್ದ ಸಂದರ್ಭ ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಬಂದು ಹಲ್ಲೆಗೈದು ಪರಾರಿಯಾಗಿದ್ದ ಆರೋಪಿಗಳ ಪತ್ತೆಯ ಬಗ್ಗೆ ಪಣಂಬೂರು ಪೆÇಲೀಸ್ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ಜನವರಿ 10ರಂದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮಕ್ಕೆ ಸುರತ್ಕಲ್ ಪೆÇಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

LEAVE A REPLY