ಬೆಳಿಗ್ಗೆ ಜೈಲು, ಮಧ್ಯಾಹ್ನ ಬೇಲು

ಮುದರಂಗಡಿ ಮಸೀದಿಗೆ ಕಲ್ಲೆಸೆದ ಆರೋಪಿಗಳಿಗೆ ಬಿಡುಗಡೆ ಭಾಗ್ಯ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಅಕ್ಕಿಸಾಗಿಸುತ್ತಿದ್ದ ವಾಹನ ಚಾಲಕ-ನಿರ್ವಾಹಕ ಯುವಕರಿಗೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಡೆದ ಘರ್ಷಣೆ ವೇಳೆ ಮುದರಂಗಡಿ ಮುಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ 17 ಮಂದಿಯನ್ನು ಬಂಧಿಸಿದ್ದು, ಅವರಿಗೆ ಬೆಳಿಗ್ಗೆ ಬಳ್ಳಾರಿ ಜೈಲು ಎಂಬುದಾಗಿ ಸುದ್ದಿ ಹಬ್ಬಿದರೆ ಮಧ್ಯಾಹ್ನ ಬೇಲು ಸಿಕ್ಕಿ ಬಿಡುಗಡೆ ಭಾಗ್ಯ ಲಭಿಸಿದೆ.

ಭಾನುವಾರ ರಾತ್ರಿ ಆರೋಪಿಗಳದ ಪಲಿಮಾರು, ಎಲ್ಲೂರು, ಪೆಜತ್ತಕಟ್ಟೆ, ಸಾಂತೂರು, ಮುಲ್ಕಿ, ಇನ್ನಾ, ಕಂಚಿನಡ್ಕ ಹಾಗೂ ಪಣಿಯೈರು ಪ್ರದೇಶದ ಆರೋಪಿಗಳಾದ ರಾಯೇಶ್ ಪೈ, ಕಿರಣ್, ಪ್ರಕಾಶ್, ಸುಧೀರ್ ಪೂಜಾರಿ, ಪ್ರಶಾಂತ್ ಕುಲಾಲ್, ಅಕ್ಷಿತ್, ಸುರೇಶ್, ಗಣೇಶ್ ಪೂಜಾರಿ, ಸುನೀಲ್, ಸುಖೇಶ್, ಕೀರ್ತನ್, ಶರತರಾಜ್, ಕಾರ್ತಿಕ್, ಗಿರೀಶ್ ಪುತ್ರನ್, ಸುರೇಂದ್ರ ಹಾಗೂ ಹರೀಶ್ ಇವರುಗಳನ್ನು ಭಾನುವಾರ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿದಾಗ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಈ ಆರೋಪಿಗಳಿಗೆ ಬಳ್ಳಾರಿ ಜೈಲು ಎನ್ನಲಾಗಿತ್ತಾದರೂ ಮಧ್ಯಾಹ್ನ ನಡೆದ ವಾದ ವಿವಾದಗಳನ್ನು ಪರಿಶೀಲಿಸಿ ಬೇಲ್ ಜಾರಿ ಮಾಡುವ ಮೂಲಕ ಆರೋಪಿಗಳಿಗೆ ಬಿಡುಗಡೆ ಭಾಗ್ಯ ದೊರಕಿದೆ. ಉಳಿದಂತೆ ಇನ್ನೂ 25 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು ಇವರ ವಿರುದ್ಧ ದೊಂಬಿ, ಮತೀಯ ಭಾವನೆಗೆ ದಕ್ಕೆ, ಸೊತ್ತು ನಾಶ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಮೈಗೆ ಕೈ ಹಾಕಿ ತಳ್ಳಿದ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ತಂಡಗಳಾಗಿ ಕಾರ್ಯಾಚರಿಸುತ್ತಿದ್ದಾರೆ.

ಕೋಮು ಸಂರ್ಘಷಕ್ಕೆ ಅವಕಾಶ ನೀಡದಂತೆ ಮುಂಜಾಗ್ರತಾ ಕ್ರಮದ ಹಿನ್ನಲೆಯಿಂದ ಪಡುಬಿದ್ರಿಯಲ್ಲಿ ಮುನ್ನೂರಕ್ಕೂ ಅಧಿಕ ಪೊಲೀಸರಿಂದ ಪಹರೆ ಕಾರ್ಯ ನಡೆಯುತ್ತಿದೆ,