`ಪೆÇಲೀಸ್ ಗೂಂಡಾಗಿರಿ’ ವಿರುದ್ಧ ಎಂಎಸ್ಸೆಫ್ ಆಕ್ರೋಶ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೆÇಲೀಸ್ ಗೂಂಡಾಗಿರಿ ವಿರುದ್ಧ ಲೀಗ್ ನೇತಾರರು ಮೌನ ಪಾಲಿಸುತ್ತಿರುವುದಾಗಿ ಎಂಎಸ್ಸೆಫ್ ಮಂಡಲ ಕಾರ್ಯಕಾರಿ ಸಮಿತಿ ಆರೋಪಿಸಿದೆ.

ಮಂಡಲಾಧ್ಯಕ್ಷ ಅನಸ್ ಎದುರ್ತೋಡ್ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪೆÇಲೀಸರ ಆಕ್ರಮಣದ ವಿರುದ್ಧ ನೇತಾರರು ಮೌನ ಪಾಲಿಸದರೆ ಕಾರ್ಯಕರ್ತರೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಲಿರುವುದಾಗಿ ಅವರು ಎಚ್ಚರಿಸಿದ್ದಾರೆ.

ಕಾಸರಗೋಡು ಮುನ್ಸಿಪಲ್ ಲೀಗ್ ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ವಿರುದ್ಧ ಕಾರ್ಯಕರ್ತರು ಹರಿಹಾಯ್ದಿದ್ದಾರೆ. ಚರ್ಚೆಯಲ್ಲಿ ತೀರ್ಮಾನಿಸಲಾಗುವ ತೀರ್ಮಾನಗಳನ್ನು ಜಾರಿಗೆ ತರಲು ವಿಫಲವಾದಲ್ಲಿ ಇನ್ನು ಮುಂದಕ್ಕೆ ಯಾವುದೆ ಕಾರ್ಯಕ್ರಮಕ್ಕೂ ಸಹಕಾರ ನೀಡೆವು ಎಂಬುದಾಗಿ ಎಂಎಸ್ಸೆಫ್ ತಿಳಿಸಿದೆ.