ಸಂಸದಗೇ ಒಂದು ಕಾನೂನು ಇದೆಯೇ

ಹುಣಸೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಹನುಮ ಜಯಂತಿ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದೆಂದು ಪೊಲೀಸರು ಮುಂಚಿತವಾಗಿಯೇ ಮೆರವಣಿಗೆ ಸಾಗುವ ಮಾರ್ಗವನ್ನು ತೋರಿದ್ದರು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಪ್ರತಾಪ ಸಿಂಹ ನಿರ್ಬಂಧಿತ ರಸ್ತೆಯಲ್ಲಿ ತಾವೇ ಸ್ವತಃ ನಿರ್ಲಕ್ಷ್ಯ ಚಾಲನೆ ಮಾಡಿ ಕರ್ತವ್ಯನಿರತ ಪೊಲೀಸರನ್ನು ಲೆಕ್ಕಿಸದೇ ಬ್ಯಾರಿಕೇಡಿಗೆ ಡಿಕ್ಕಿ ಹೊಡೆದು ಹೋಗಿದ್ದಾರೆ. ಸಂಸದರು ಕಾನೂನನ್ನು ಕೈಗೆತ್ತಿಕೊಳ್ಳಬಹುದೇ ಇದೇನಾ ಸಂಸದರ ಕರ್ತವ್ಯ ಎಂದು ಅವರನ್ನು ಮತದಾರರು ಕೇಳಬೇಕು ಕಾನೂನು ಉಲ್ಲಂಘಿಸಿದ ಸಂಸದರ ವಿರುದ್ಧ ಕ್ರಮ ಜರುಗಿಸಬೇಕು ದೇಶದಲ್ಲಿ ಸಂಸದರಿಗೊಂದು ಬೇರೆ ಕಾನೂನು ಇಲ್ಲ ಎಂಬುದನ್ನು ಮೈಸೂರು ಕೊಡಗು ಲೋಕಸಭಾ ಸದಸ್ಯರು ತಿಳಿದುಕೊಳ್ಳಲಿ

  • ಸ್ವರೂಪ್ ಶೆಟ್ಟಿ  ಬಸ್ರೂರು ಬೈಂದೂರು