ಯಾವ ಪುರುಷಾರ್ಥಕ್ಕೆ ಈ ರೈಲುಗಳು

ಟಿ ಎ ಪೈ ಕನಸಿನ ಕೂಸಾದ ಮಂಗಳೂರು ಬೆಂಗಳೂರು ರೈಲು ಮೀಟರ್ ಗೇಜಿನಲ್ಲಿ ಆರಂಭಗೊಂಡಾಗ ಇಡೀ ಜನತೆಗೆ ಸಂಭ್ರಮದಕ್ಷಣ. ನಮ್ಮೂರಿಗೆ ರೈಲು ಬಂತೆಂಬ ಹರ್ಷದ ಹೊನಲು ನಂತರ ಬ್ರಾಡ್ಗೇಜ್ ಆಯಿತು ಈ ಮಾರ್ಗ ಆದರೆ ಇಲ್ಲಿ ಸಮಸ್ಯೆಯ ಆರಂಭ ಸಣ್ಣ ಸಣ್ಣ ನಿಲ್ದಾಣಗಳಲ್ಲಿ ರೈಲು ನಿಲ್ಲದೆ ಓಡಾಟ ನಂತರ ದಿನಕ್ಕೊಂದರಂತೆ ಮಾರ್ಗ ಬದಲಾವಣೆ ಅಂತೂ ಬೆಂಗಳೂರು ಮುಟ್ಟುವಾಗ ಈ ರೈಲು ಮಾರ್ಗಕ್ಕಿಂತ ಬಸ್ ಉತ್ತಮವೆಂದು ಅಭಿಪ್ರಾಯ ಈಗಂತೂ ಲಂಗು ಲಗಾಮಿಲ್ಲದೆ ರೈಲುಗಳ ಓಡಾಟ. ಇನ್ನಾದರೂ ನಮ್ಮ ಎಂಪಿ ಸಾಹೇಬ್ರು ದಯವಿಟ್ಟು ಈ ಕಡೆ ಗಮನಕೊಡಿ ಇಲ್ಲದಿದ್ರೆ ರೈಲು ನಿಲ್ಲಿಸಿ ಬಿಡಿ

  • ಕೇಶವ  ಪುತ್ತೂರು