ಹೇರಳ ಆಸ್ತಿ ಹೊಂದಿದ ಸಂಸದರ ಪಟ್ಟಿ ಸುಪ್ರೀಂಗೆ

ಸಾಂದರ್ಭಿಕ ಚಿತ್ರ

 ನವದೆಹಲಿ : 26 ಲೋಕಸಭಾ ಸಂಸದರು ಮತ್ತು 215 ಶಾಸಕರು ಹಾಗೂ ಇಬ್ಬರು ರಾಜ್ಯಸಭಾ ಸದಸ್ಯರಿಗೆ ಸಂಬಂಧಿಸಿದ ಆಸ್ತಿ ಪರಿಶೀಲನಾ ವರದಿಗಳು ಈಗಾಗಲೇ ಕೈಸೇರಿದ್ದು, ಇವುಗಳನ್ನು ಸುಪ್ರೀಂ ಕೋರ್ಟಿಗೆ ಮೊಹರು ಹಾಕಲಾದ ಕವರೊಂದರಲ್ಲಿ ಸಲ್ಲಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೇಳಿದೆ. ಸರ್ಕಾರದಿಂದ ಕೋರಲಾದ ವಿವರಣೆಯೊಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದ್ದು, ಈ ಕೇಸುಗಳಲ್ಲಿ ಹೇರಳ ಆಸ್ತಿ ಹೊಂದಿರುವ ಜನಪ್ರತಿನಿಧಿಗಳ ವಿರುದ್ಧ ಕ್ರಮ ಸಾಧ್ಯತೆ ತಳ್ಳಿಹಾಕುವಂತಿಲ್ಲ.