ಪ್ರೆಸಿಡೆಂಟ್ ಕುಂದಾಪುರ, ಕೋಸ್ಟಲ್ ಡೈಜೆಸ್ಟ್, ಕಂಕನಾಡಿ ನೈಟ್ ರೈಡರ್ಸ್ ತಂಡಗಳಿಗೆ ವೀರೋಚಿತ ಗೆಲುವು

ಎಂಪಿಎಲ್ ಕ್ರಿಕೆಟ್ ಟೂರ್ನಿ

  • ಎಸ್ ಜಗದೀಶ್ಚಂದ್ರ ಅಂಚನ್ ಸೂಟರಪೇಟೆ

ಮಂಗಳೂರು : ನಗರದ ಪಣಂಬೂರು ಎನ್ ಎಂ ಪಿ ಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಂಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಎರಡು ಪಂದ್ಯಗಳು ಹೋರಾಟಕಾರಿ ಮುಕ್ತಾಯವನ್ನು ಕಂಡಿತು.

ದಿನದ ಮೊದಲ ಮುಖಾಮುಖಿ ಪ್ರೆಸಿಡೆಂಡ್ ಕುಂದಾಪುರ ಹಾಗೂ ಯುನೈಟೆಡ್ ಉಳ್ಳಾಲ ತಂಡಗಳ ನಡುವೆ ನಡೆಯಿತು. ಪ್ರೆಸಿಡೆಂಟ್ ಕುಂದಾಪುರ ಈ ಬಾರಿಯು ಗೆಲುವಿನ ಲೆಕ್ಕಾಚಾರದಲ್ಲೇ ಆಡಿತು. ಹಾಗಾಗಿ ಪಂದ್ಯ ರೋಚಕವಾಗಿತ್ತು.

ಮೊದಲು ಬ್ಯಾಟಿಂಗ್ ನಡೆಸಿದ ಕುಂದಾಪುರ ತಂಡವು ನಾಯಕ ಬಿ ಅಖಿಲ್ ಅವರು ಆಕರ್ಷಕ ಆಟವನ್ನು ಆಡಿ 55 ರನ್, ನೆಹಾಲ್ 32 ರನ್ ಹಾಗೂ ಕೆ ಸಿ ಕಾರ್ಯಪ್ಪ 23 ರನ್ ಗಳಿಸಿ ನಿಗದಿತ 20 ಓವರುಗಳಲ್ಲಿ 169 ರನ್ ಗಳಿಸಿತು. ನಿತಿನ್ ಮುಲ್ಕಿ 21 ರನ್ನಿಗೆ 4 ವಿಕೆಟ್ ಪಡೆದು ಮಿಂಚಿದರು.

cricket2

ಈ ಮೊತ್ತವನ್ನು ಬೆಂಬತ್ತಿದ ಯುನೈಟೆಡ್ ಉಳ್ಳಾಲ್ ತಂಡದ ಸಾದಿಕ್ ಕಿರ್ಮಾನಿ ಅವರು ಹೋರಾಟಕಾರಿ ಬ್ಯಾಟಿಂಗ್ ನಡೆಸಿ 83 ರನ್ ಬಾರಿಸಿದರೂ ತನ್ನ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕುಂದಾಪುರ ತಂಡಕ್ಕೆ 3 ರನ್ನುಗಳ ವೀರೋಚಿತ ಗೆಲುವು ದೊರೆಯಿತು. ಸರ್ವಾಂಗೀಣ ಪ್ರದರ್ಶನ ನೀಡಿದ ಬಿ ಅಖಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಕೋಸ್ಟಲ್ ತಂಡಕ್ಕೆ ಗೆಲುವು

ಗುರುವಾರ ನಡೆದ ಇನ್ನೊಂದು ಪಂದ್ಯದಲ್ಲಿ ಕೋಸ್ಟಲ್ ಡೈಜೆಸ್ಟ್ ತಂಡವು ತನ್ನ ಹ್ಯಾಟ್ರಿಕ್ ಗೆಲುವನ್ನು ದಾಖಲಿಸಿಕೊಂಡಿತು. ಈ ಪಂದ್ಯವು ಕೂಡ ಜಿದ್ದಾಜಿದ್ದಿನ ಹೋರಾಟವನ್ನು ಕಂಡಿದೆ. ಕೋಸ್ಟಲ್ ತಂಡವು ಮೊದಲು ಬ್ಯಾಟಿಂಗ್ ನಡೆಸಿ 7 ವಿಕೆಟಿಗೆ 156 ರನ್ ಗಳಿಸಿತು. ಆದಿತ್ಯ ಸೋಮಣ್ಣ ಶತಕಾರ್ಧ (52) ಹಾಗೂ ರೋಹಿತ್ ಗೌಡ 27 ರನ್ ಗಳಿಸಿದರು.

ಈ ಮೊತ್ತವನ್ನು ಬೆನ್ನತ್ತಿದ ಉಡುಪಿ ಟೈಗರ್ಸ್ ತಂಡವು ಮತ್ತೊಮ್ಮೆ ಎಡವಿತು. ಕೊನೆಯ ಎರಡು ಓವರುಗಳಲ್ಲಿ ಸರಾಸರಿ 15ಕ್ಕೂ ಹೆಚ್ಚಿನ ರನ್ನುಗಳನ್ನು ಉಡುಪಿ ತಂಡ ಗಳಿಸಬೇಕಾಗಿತ್ತು. ಆದರೆ ಒತ್ತಡಕ್ಕೆ ಸಿಲುಕಿದ ಉಡುಪಿ ತಂಡವು ಅಂತಿಮವಾಗಿ 6 ವಿಕೆಟಿಗೆ 141 ರನ್ ಗಳಿಸಿ 15 ರನ್ನುಗಳ ಸೋಲನ್ನು ಕಂಡಿತು ಆಲ್ ರೌಂಡರ್ ಪ್ರದರ್ಶನ ನೀಡಿದ ಕೋಸ್ಟಲ್ ಡೈಜೆಸ್ಟ್ ತಂಡದ ಆದಿತ್ಯ ಸೋಮಣ್ಣ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆಲ್ಲಲು ಭಾಜನರಾದರು.