ಐಕಳ ಪಂಚಾಯತ್ ವ್ಯಾಪ್ತಿಯಲ್ಲಿ ಸಂಸದ ನಳಿನ್ ಅನುದಾನ ಶೂನ್ಯ

ಬಿಜೆಪಿ ಆಡಳಿತ ಇರುವ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಸದ ನಳಿನ್ ಕಟೀಲ್ ಅನುದಾನ ಶೂನ್ಯವಾಗಿದೆ ಎಂದು ಗ್ರಾಮಸಭೆಯಲ್ಲಿ ಸೇರಿದ್ದ ಗ್ರಾಮಸ್ಥರೊಬ್ಬರು ಅಧ್ಯಕ್ಷರನ್ನು ಪ್ರಶ್ನಿಸಿದಾಗ ಅಧ್ಯಕ್ಷರು ಉತ್ತರ ಕೊಡಲು ಚಡಪಡಿಸಿದರು  ನಳಿನ್ ಅವರು ಸಭೆ ಸಮಾರಂಭದಲ್ಲಿ ಬಂದು ಜೋರಾಗಿ ಭಾಷಣ ಮಾಡಿ ಹೋಗುತ್ತಾರೆಯೇ ವಿನಃ ಸಂಸದರಾಗಿ ಇಷ್ಟು ವರ್ಷವಾದರೂ ಐಕಳ ವ್ಯಾಪ್ತಿಯಲ್ಲಿ ಸಂಸದರ ಅನುದಾನದಿಂದ ನಯಾ ಪೈಸೆ ಕೆಲಸವಾಗಿಲ್ಲ ಎಂದಾಗ ಪಂಚಾಯತ್ ಅಧ್ಯಕ್ಷರು ನಳಿನಕುಮಾರಗೆ ಎಂಟು ಅಸೆಂಬ್ಲಿ ಕ್ಷೇತ್ರ ಇರುವಾಗ ಯಾವ ಕ್ಷೇತ್ರಕ್ಕೆ ಅನುದಾನ ತರುವುದು, ಅವರ ಕ್ಷೇತ್ರ ವ್ಯಾಪ್ತಿ ವಿಸ್ತಾರ ಇದೆ ಎಂದು ಹೇಳಿದರು  ಪಂಚಾಯತ್ ಅಧ್ಯಕ್ಷರು ತಮ್ಮದೇ ಪಕ್ಷದ ಸಂಸದರ ಬಗ್ಗೆ ಮಾತನಾಡಿದಾಗ ಏನೂ ಉತ್ತರ ಹೇಳಲಾರದೇ ಅನುದಾನ ಜಿ ಪಂ  ತಾ ಪಂ ನಿಂದ ಬಂದಿದೆ ಎಂದು ಹಾರಿಕೆ ಉತ್ತರ ನೀಡಿದರು. ಒಟ್ಟಿನಲ್ಲಿ ಸಂಸದ ನಳಿನ್ ಗ್ರಾಮಸ್ಥರು ನುಡಿಯುವುದಕ್ಕೂ ಮಾಡುವುದಕ್ಕೂ ಸರಿಯಾಗಿದೆ  ಗ್ರಾಮಸ್ಥರು ಹೇಳುವಂತೆ ನಳಿನ್ ಮುಲ್ಕಿ ಮೂಡಬಿದ್ರೆ ವ್ಯಾಪ್ತಿಯಲ್ಲಿ ಚುನಾವಣೆ ಬರುತ್ತಿದ್ದಂತೆ ಇಲ್ಲಿಯೇ ಠಳಾಯಿಸಿಕೊಂಡು ಇರುವವರು  ಈ ಕ್ಷೇತ್ರದಿಂದ ಮತ ಪಡೆದು ಹೋದ ಮೇಲೆ ಇವರಿಗೆ ಏನಾಗುತ್ತದೆ  ಕ್ಷೇತ್ರದ ಮತದಾರರ ಋಣ ತೀರಿಸುವ ಕೆಲಸ ಮಾಡಬಾರದೇ   ಸಂಸದರಾಗಿ ಎರಡೂವರೆ ವರ್ಷ ಕಳೆದು ಹೋಯಿತು

  • ಜೆರಾಲ್ಡ್ ಫೆರ್ನಾಂಡೀಸ್  ಐಕಳ