ಚಳವಳಿ ಮೂಲಕ ಎಲ್ಲ ಪದ್ಧತಿ ನಿಲ್ಲಿಸುವ ಯತ್ನ ತಪ್ಪಾಗುತ್ತದೆ

ಉರುಳು ಸೇವೆ, ದೇವದಾಸಿ ಪದ್ಧತಿ, ಮಠದೊಳಗೆ ಪ್ರವೇಶ ನಿರಾಕರಣೆ, ಹೆಣ್ಣು ಮಕ್ಕಳಿಗೆ ದೇವಾಲಯ ಪ್ರವೇಶ ನಿರಾಕರಣೆ, ಮಲಹೋರುವ ಪದ್ಧತಿ ಇವೆಲ್ಲ ತೊಲಗಬೇಕಾದರೆ ಎಲ್ಲರೂ ವಿದ್ಯಾವಂತರಾಗಬೇಕು. ದೇವರಲ್ಲಿ ನಂಬುಗೆ, ಪುರಾಣಗಳಲ್ಲಿರುವ ನೀತಿಗಳ ಮನನ, ಸಹ ಪಂಕ್ತಿಯಲ್ಲಿ ಪ್ರತಿಯೊಬ್ಬರ ಕರ್ತವ್ಯ ಏನು, ದೇವಾಲಯದೊಳಗೆ ಶುಚಿತ್ವ ಪ್ರಜ್ಞೆ ಇತ್ಯಾದಿಗಳು, ಪ್ರತಿಯೊಬ್ಬರಿಗೂ ಓದಿ ಅಥವಾ ತಿಳಿದು ಬರಬೇಕಾದರೆ ವಿದ್ಯೆ ಅಗತ್ಯ. ಆಮೇಲೆ ಆ ವಿಚಾರಗಳ ಬಗ್ಗೆ ಸಮೀಕ್ಷೆ ನಡೆಸಿ ವಿಜ್ಞಾನ ತಂತ್ರಜ್ಞಾನಗಳ ಸಹಾಯದೊಂದಿಗೆ ಮೆಲ್ಲಮೆಲ್ಲನೆ ಬದಲಾವಣೆ ತರಬಹುದು. ಹಾಗಲ್ಲದೆ ಒಮ್ಮೆಲೆ ಚಳುವಳಿ ಮೂಲಕ ಈ ಎಲ್ಲ ಪದ್ಧತಿಗಳನ್ನು ನಿಲ್ಲಿಸುವ ಯತ್ನ ತಪ್ಪಾಗುತ್ತದೆ. ಅನರ್ಥಕಾರಿಯೂ ಆಗಬಹುದು.
ಜನರು ಈ ಎಲ್ಲ ವಿಚಾರಗಳನ್ನು ತಾವಾಗಿಯೇ ತ್ಯಜಿಸುವಂತೆ ಮಾಡುವುದು ತುಂಬಾ ಮುಖ್ಯ. ವಿದ್ಯೆಯು ಚಿಂತನೆ, ಯಾವುದು ಸರಿ, ಯಾವುದು ತಪ್ಪು ಎಂಬ ಸ್ಪಷ್ಟ ನಿಲುವು. ವಿವೇಚನೆಯನ್ನು ಬೆಳೆಸುತ್ತದೆ. ನಾವು ಇರಿಸುವ ಹೆಜ್ಜೆಯಿಂದ ಯಾರ ಮನಸ್ಸಿಗೂ ನೋವಾಗಬಾರದಲ್ಲವೇ

  • ಜಿ ಶ್ರೀಧರರಾವ್ ಉಡುಪಿ