ಚುಡಾವಣೆ : ಇಬ್ಬರು ಆರೆಸ್ಟ್

ಸಾಂದರ್ಭಿಕ ಚಿತ್ರ

ಮಂಗಳೂರು : ಕಾಲೇಜು ಯುವತಿಯನ್ನು ಹಿಂಬಾಲಿಸಿಕೊಂಡು ಬರುತ್ತಿರುವುದಲ್ಲದೇ ಪ್ರತಿನಿತ್ಯ ಆಕೆಯನ್ನು ಚುಡಾಯಿಸುತ್ತಿದ್ದ ಇಬ್ಬರು ಯುವಕರನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗಳು ರಕ್ಷಿತ್ ಶೆಟ್ಟಿ (29) ಮತ್ತು ಸಾಜಿದ್ (23) ಮಂಗಳೂರಿನವರಾಗಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಸ್ನೇಹ ಸಂಪಾದಿಸಲು ಯತ್ನಿಸುತ್ತಿದ್ದ ಇಬ್ಬರೂ ಆರೋಪಿಗಳು ಪ್ರತಿನಿತ್ಯ ಕಾಲೇಜು ಬಿಟ್ಟ ಬಳಿಕ ಈಕೆಯನ್ನು ಫಾಲೋ ಮಾಡಿಕೊಂಡು ಬರುತ್ತಿದ್ದರು. ಸ್ಕೂಟರ್‍ನಲ್ಲೂ ಹಿಂಬಾಲಿಸಿಕೊಂಡು ಬಂದು ಚುಡಾಯಿಸುತ್ತಿದ್ದರು. ಇದನ್ನು ಕಂಡ ಯುವತಿ ಮಹಿಳಾ ಠಾಣಾ ಪೊಲೀಸರಿಗೆ ದೂರು ನೀಡಿದ್ದಳು.