ತಾಯಿ, ಮಗಗೆ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಲ್ಪೆ ಸಮೀಪದ ಕೋಡಿಬೆಂಗ್ರೆ ತುಳಸಿ ಶ್ರೀ ನಿವಾಸಿ ಪ್ರವೀಣ್ ಸಾಲಿಯಾನ್ (29) ಎಂಬಾತ ತನ್ನ ಚಿಕ್ಕಪ್ಪನನ್ನು ಭೇಟಿಯಾಗಲು ಬಂದಿದ್ದ ವೇಳೆ ಮನೆಯ ಅಂಗಳದಲ್ಲಿದ್ದ ಆರೋಪಿಗಳಾದ ನಾಗೇಶ್ ಡಿ ಕುಂದರ್ ಮತ್ತು ಪತ್ನಿ ಪ್ರಮೀಳಾ ಸೇರಿಕೊಂಡು ಪ್ರವೀಣಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಲ್ಲದೇ, ಇನ್ನೊಮ್ಮೆ ಮನೆಗೆ ಬಂದರೆ ಕೈಕಾಲು ಕಡಿದು ಹಾಕುವುದಾಗಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಆ ವೇಳೆ ಬಂದ ಪ್ರವೀಣ್ ತಾಯಿಗೂ ಆರೋಪಿಗಳು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಆರೋಪಿಗಳ ವಿರುದ್ಧ ಮಲ್ಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.