ಕ್ವಾರಿಗೆ ಬಿದ್ದು ತಾಯಿ ಮಗು ದಾರುಣ ಸಾವು

ಮೃತ ತಾಯಿ ಮತ್ತು ಮಗು

ನಮ್ಮ ಪ್ರತಿನಿಧಿ ವರದಿ
ಕುಂದಾಪುರ : ಬಟ್ಟೆ ತೊಳೆಯಲೆಂದು ಕಲ್ಲುಕ್ವಾರಿಗೆ ತೆರಳಿದ ಸಂದರ್ಭ ತಾಯಿ ಹಾಗೂ ಮೂರು ವರ್ಷದ ಮಗು ಕ್ವಾರಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ಸಾೈಬ್ರಕಟ್ಟೆ ಸಮೀಪ ಹೋರ್ವರಬೆಟ್ಟಿನಲ್ಲಿ ಶನಿವಾರ ನಡೆದಿದೆ.
ಭದ್ರಾವತಿ ಮೂಲದ ಸ್ಥಳೀಯ ಕೂಲಿ ಕಾರ್ಮಿಕ ವೀರೇಶ್ ಪತ್ನಿ ಚಂದ್ರಿಕಾ ಯಾನೆ ಕವಿತಾ (28) ಹಾಗೂ ಆಕೆಯ ಪುತ್ರಿ ಲಿಖಿತ (3) ಮೃತ ದುರ್ದೈವಿಗಳು.
ಭದ್ರಾವತಿಯ ನಿವಾಸಿಯಾದ ವೀರೇಶ್ ಪತ್ನಿ ಚಂದ್ರಿಕಾ ಹಾಗೂ ತನ್ನ ಮೂವರು ಮಕ್ಕಳೊಂದಿಗೆ ಸಾೈಬ್ರಕಟ್ಟೆಯಲ್ಲಿ ಎರಡು-ಮೂರು ವರ್ಷದಿಂದ ವಾಸಿಸುತ್ತಿದ್ದು, ಕಿರಾಡಿಯಲ್ಲಿನ ಕಲ್ಲುಕ್ವಾರಿಗೆ ಗಂಡ ವೀರೇಶ್ ಕೆಲಸಕ್ಕೆ ತೆರಳಿದ್ದ  ಎಂದಿನಂತೆ ಮನೆ ಸಮೀಪದ ಕಲ್ಲುಕ್ವಾರಿಯ ಹೊಂಡಕ್ಕೆ ತನ್ನ ಎರಡು ಮಕ್ಕಳೊಂದಿಗೆ ಬಟ್ಟೆ ತೊಳೆಯಲು ಚಂದ್ರಿಕಾ ತೆರಳಿದ್ದು  ಈ ಸಂದರ್ಭ ದಡದಲ್ಲಿ ಆಟವಾಡುತ್ತಿದ್ದ ಚಿಕ್ಕ ಮಗಳು ಲಿಖಿತ ಕಾಲುಜಾರಿ ನೀರಿಗೆ ಬಿದ್ದಿದ್ದಾಳೆ. ಮಗುವನ್ನು ರಕ್ಷಿಸಲು ತಾಯಿಯೂ ನೀರಿಗೆ ಜಿಗಿದಿದ್ದು  ಎರಡನೇ ಮಗಳು ಶಿಲ್ಪಾ ಕೂಡಲೇ ಮನೆಗೆ ತೆರಳಿ ತನ್ನ ದೊಡ್ಡಮ್ಮನಲ್ಲಿ ವಿಷಯ ತಿಳಿಸಿದ್ದು, ಮನೆಯವರು ಬರುವುದರೊಳಗೆ ತಾಯಿ ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬ್ರಹ್ಮಾವರ ಪೆÇಲೀಸ್ ಠಾಣೆಯ ಎಸೈ ಮಧು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ  ಮುಳುಗು ತಜ್ಞ ಶಂಕರನಾರಾಯಣದ ಮಂಜುನಾಥರ ಸಹಾಯದಿಂದ ಶವವನ್ನು ಮೇಲೆತ್ತಲಾಯಿತು.