ಬಲಪಂಥೀಯ ಸಂಘಟನೆಗಳ ಕೈವಾಡ ಬಗ್ಗೆ ಮತ್ತಷ್ಟು ತನಿಖೆ

ಗೌರಿ ಹತ್ಯೆ

ಬೆಂಗಳೂರು : ವಿದ್ವಾಂಸ ಎಂ ಎಂ ಕಲಬುರ್ಗಿ ಹಾಗೂ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ ಸಂಶಯಿಸಲಾದಂತೆ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲೂ ಬಲಪಂಥೀಯ ಸಂಘಟನೆಗಳ ಕೈವಾಡದ  ಸಾಧ್ಯತೆಗಳ ಬಗ್ಗೆ  ವಿಶೇಷ ತನಿಖಾ ತಂಡವು  ತನಿಖೆ ನಡೆಸುತ್ತಿದೆ. ಪ್ರಸಕ್ತ

ತಂಡದೊಂದಿಗೆ  ಕಲಬುರ್ಗಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಕೂಡ ಸೇರಿಕೊಂಡಿದೆ.ಸಿಐಡಿ ಈಗಾಗಲೇ ಈಗಾಗಲೇ ಬಲಪಂಥೀಯ ಸಂಘಟನೆಯೊಂದರ ಸದಸ್ಯನೆಂದು ಹೇಳಲಾದ ರುದ್ರ ಪಾಟೀಲ್ ಎಂಬಾತನಿಗಾಗಿ ಶೋಧಿಸುತ್ತಿದ್ದು ಈತ 2009ರ ಗೋವಾ ಸ್ಫೋಟ ಪ್ರಕರಣದಲ್ಲಿಯೂ ಆರೋಪಿಯೆನ್ನಲಾಗಿದೆ. ಈ ಪ್ರಕರಣದ ನಂತರ ಆತ ನಾಪತ್ತೆಯಾಗಿದ್ದಾನೆ. ಆತನಿಗಾಗೀ ಈಗ ಮತ್ತೆ ಶೋಧ ಮುಂದುವರಿಸಲಾಗಿದ್ದು ಆತನ ಬಂಧನವಾಗಿದ್ದೇ ಆದಲ್ಲಿ ಅದು ಗೌರಿ  ಪ್ರಕರಣದ ವಿಚಾರದಲ್ಲೂ ಹಚ್ಚಿನ ಬೆಳಕು ಚೆಲ್ಲಬಹುದು ಎಂಬುದು ತನಿಖಾಧಿಕಾರಿಗಳ ಆಶಯ.

ಪನ್ಸಾರೆ ಹಾಗೂ ದಾಭೋಲ್ಕರ್ ಹತ್ಯೆ ಪ್ರಕರಣಗಳಲ್ಲಿನ ಶಂಕಿತರ ಚಲನವಲನಗಳ ಮೇಲೂ ತನಿಖಾ ತಂಡ ನಿಗಾ ಇಟ್ಟಿದೆ.