ಕಪ್ಪತಗುಡ್ಡ ಅರಣ್ಯ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಮತ್ತಷ್ಟು ವಿರೋಧ

ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಪರಿಸರವಾದಿಗಳ ಪ್ರತಿಭಟನೆ

ಗದಗ : ಮೀಸಲು ಅರಣ್ಯ ಅಂತಸ್ತು ಹೊಂದಿರುವ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಸಾರ್ವಜನಿಕ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.

ಇಲ್ಲಿನ ಮುಂಡರ್ಗಿಯ ದಂಬಾಲದಲ್ಲಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಗದಗ, ಮುಂಡರ್ಗಿ ಮತ್ತು ಶಿರಹಟ್ಟಿಯ ತಾಲೂಕಿನ ಸಾವಿರಾರು ಮಂದಿ ಈ ಕಾಮಗಾರಿಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಡೀಸಿ ಮನೋಜ್ ಜೈನ್ ಮತ್ತು ಅರಣ್ಯಗಳ ಪ್ರಧಾನ ಸಂರಕ್ಷಣಾಧಿಕಾರಿ ಹೊಸಮಠ ಇದ್ದರು.

ಸಭೆಯಲ್ಲಿ ಸುಮಾರು 164 ಮನವಿ ನೀಡಲಾಗಿದೆ. ಈ ಸಂದರ್ಭದಲ್ಲಿ 35 ಮಂದಿ ಮಾತನಾಡಿದ್ದಾರೆ. ಕಪ್ಪತಗುಡ್ಡದಲ್ಲಿ ಬಾಲ್ದೋಟ ಕಂಪೆನಿ ಗಣಿಗಾರಿಕೆ ಅನುಮತಿ ಪಡೆದಿದೆ. ಅರಣ್ಯ ಪ್ರದೇಶದಲ್ಲಿನ ಗಣಿಗಾರಿಕೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ದೇಶದ ಕೆಲವೇ ಪ್ರದೇಶದಂತೆ ಕಪ್ಪತಗುಡ್ಡದಲ್ಲೂ ಚಿನ್ನದ ನಿಕ್ಷೇಪಗಳಿವೆ. ಇಲ್ಲಿ ನಡೆಯಲಿರುವ ಅತಿ ಆಳದ ಗಣಿಗಾರಿಕೆಯಿಂದ ಪರಿಸರದ ಮೇಲೆ ಯಾವುದೇ ಪ್ರತೀಕೂಲ ಪ್ರಭಾವ ಬೀರುವುದಿಲ್ಲ ಎಂದು ಕಂಪೆನಿ ಪ್ರನಿಧಿಗಳು ಹೇಳಿದ್ದಾರೆ.