ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ರಜೆ ದಿನಗಳು ಹೆಚ್ಚಿವೆ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರ ಇತ್ತೀಚೆಗೆ 15 ದಿನಗಳ ಸರಕಾರಿ ಹಾಗೂ ಶಾಲೆಗಳ ರಜೆ ಕಡಿತಗೊಳಿಸಿದ್ದಕ್ಕಾಗಿ ಹೊಗಳಿಕೆಯ ಸುರಿಮಳೆಯಾಯಿತು ಹಾಗೂ ಇತರ ರಾಜ್ಯಗಳೂ ಅದನ್ನು ಅನುಸರಿಸಬೇಕು ಎಂದು ಕೆಲವರಿಂದ ಬೇಡಿಕೆ ಬಂತು. ಆದರೆ ಜನರು ಇಲ್ಲಿ ಮೂಲ ವಿಷಯವನ್ನೇ ಸರಿಯಾಗಿ ಗಮನಿಸಿಲ್ಲ. ಉತ್ತರಪ್ರದೇಶದಲ್ಲಿ ಅಖಿಲೇಶ್ ಸರಕಾರ ಇರುವಾಗ ಶಾಲೆಗಳಿಗೆ ಹಾಗೂ ಸರಕಾರಿ ಕಚೇರಿಗಳಿಗೆ ಒಟ್ಟು 46 ದಿನಗಳ ರಜೆಗಳಿದ್ದವು. ಅವುಗಳಲ್ಲಿ ಯೋಗಿ ಕೇವಲ 15 ದಿನಗಳನ್ನು ಮಾತ್ರ ಕಡಿತಗೊಳಿಸಿದ್ದರು. ಅಂದರೆ ಇನ್ನೂ 35 ದಿನಗಳ ರಜೆ ಉಳಿದುಕೊಂಡಿವೆ.
ಇದಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶಾಲೆಗಳಿಗೆ ಹಾಗೂ ಸರಕಾರಿ ಕಚೇರಿಗಳಿಗೆ ಒಟ್ಟೂ ರಜೆ ಇರುವುದು ಕೇವಲ 21 ದಿನಗಳು ಮಾತ್ರ. ಇದರಲ್ಲಿ ರವಿವಾರ ಬರುವ ಹಬ್ಬ ಹಾಗೂ ಬ್ಯಾಂಕುಗಳಿಗೆ ಮಾತ್ರ ಇರುವ ವಾರ್ಷಿಕ ಲೆಕ್ಕಾಚಾರ ರಜೆ ಸೇರಿಲ್ಲ. ಇದಕ್ಕೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ಇನ್ನೂ 10 ದಿನಗಳ ರಜೆ ಹೆಚ್ಚು ಇದೆ. ಈ ಹೆಚ್ಚಿನ 10 ದಿನ ರಜೆಗಳನ್ನೂ ಯೋಗಿ ಕಡಿಮೆ ಮಾಡಿದರೆ ಆಗ ಅವರನ್ನು ಸಮರ್ಥ ಆಡಳಿತಗಾರ ಎಂದು ಒಪ್ಪಬಹುದು
ಒಂದು ವೇಳೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಥವಾ ಅಖಿಲೇಶ್, ಮಾಯಾವತಿ ಸರಕಾರ ಕಡಿತಗೊಳಿಸಿದ್ದರೆ ಸಂಘ ಪರಿವಾರದ ಪ್ರತಿಕ್ರಿಯೆ ಹೇಗಿರುತ್ತಿತ್ತು ಗೊತ್ತೇ  ಹಿಂದೂ ಸಂತರ ಹಾಗೂ ಗಣ್ಯರ ಜಯಂತಿಯ ರಜೆ ಕಡಿತಗೊಳಿಸಿ ಸರಕಾರ ಅಲ್ಪಸಂಖ್ಯಾತರ ತುಷ್ಠೀಕರಣದಲ್ಲಿ ತೊಡಗಿದೆ. ಹಿಂದೂ ಗಣ್ಯರ ರಜೆ ಕಡಿತದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಭಯಂಕರ ಧಕ್ಕೆಯಾಗಿದೆ ಎಂದು ಬೊಬ್ಬಿರಿಯುತ್ತಿರಲಿಲ್ಲವೇ ಹೀಗಿದೆ ಬಿಜೆಪಿಯವರ ಅಜೆಂಡಾ

  • ಮನೋಹರ ಕೋಟ್ಯಾನ್
    ಕೊಡಿಯಾಲಬೈಲ್  ಮಂಗಳೂರು