ನೋಟು ಅಮಾನ್ಯದಿಂದ ಭ್ರಷ್ಟಾಚಾರ ಹೆಚ್ಚಳ

ಒಂದು ತಿಂಗಳಿಂದಲೂ ಆಗುತ್ತಿರುವ ಹೊಸ ನೋಟುಗಳ ಕೊರತೆಯು ಸರಕಾರದ ತಪ್ಪು ಲೆಕ್ಕಾಚಾರದಿಂದಾಗಿ ಆದುದಲ್ಲ, ಅದು ಬ್ಯಾಂಕುಗಳಲ್ಲಿಯ ಭ್ರಷ್ಟಾಚಾರದಿಂದಾಗಿ ಕೊರತೆ ಆದದ್ದು ಎಂದು ಹೇಳಿ ಕೇಂದ್ರ ವಿತ್ತ ಸಚಿವಾಲಯ ತನ್ನ ತಪ್ಪನ್ನು ಬ್ಯಾಂಕುಗಳ ತಲೆಯ ಮೇಲೆ ಹೊರಿಸಿ ತಾನು ಪಾರಾಗುವ ಪ್ರಯತ್ನ ಮಾಡುತ್ತಿದೆ. ಹಾಗಾದರೆ ನೋಟು ರದ್ದತಿ ಭ್ರಷ್ಟಾಚಾರವನ್ನು ಮಟ್ಟ ಹಾಕುತ್ತದೆ ಎಂದು ಅಡಿಗಡಿಗೆ ಮೋದಿ ಮತ್ತು ಬಿಜೆಪಿಯವರು ಹೇಳುತ್ತಿದ್ದದ್ದು ಸಂಪೂರ್ಣ ಉಲ್ಟಾ ಆಯಿತು ಎಂದು ಸರಕಾರವೇ ಒಪ್ಪಿಕೊಂಡಿದೆ ಎಂದಾಯಿತು. ಅಂದರೆ ಹಳೆ ನೋಟು ರದ್ದತಿ ಹಾಗೂ ಹೊಸ ನೋಟು ಚಲಾವಣೆಯು ಭ್ರಷ್ಟಾಚಾರ ಕಡಿಮೆ ಮಾಡುವ ಬದಲು ಭ್ರಷ್ಟಾಚಾರ ಹೆಚ್ಚೇ ಮಾಡಿತು ಎಂದು ಸರಕಾರವೇ ಅಧಿಕೃತವಾಗಿ ಒಪ್ಪಿಕೊಂಡಂತಾಯಿತು.
ಅಷ್ಟೇ ಅಲ್ಲ ನೋಟು ರದ್ದತಿಯಾದ ಮೇಲೆ ಹಿಂದಿನ ಒಂದು ತಿಂಗಳಲ್ಲಿ ನಾನು ಮತ್ತು ನನ್ನ ಸಹೋದ್ಯೋಗಿಗಳು ನಮ್ಮ ಕಾರ್ಯನಿಮಿತ್ತ ವಿವಿಧ ಕೇಂದ್ರ ಮತ್ತು ರಾಜ್ಯ ಸರಕಾರಿ ಕಚೇರಿಗಳಿಗೆ ಭೇಟಿ ಕೊಡುವಾಗ ಕಂಡಿದ್ದೇನೆಂದರೆ ಯಾವೊಂದು ಸರಕಾರಿ ಕಚೇರಿಯಲ್ಲಿಯೂ ಲಂಚಗುಳಿತನ ಒಂಚೂರೂ ಕಡಿಮೆಯಾಗಿಲ್ಲ. ಮಂಗಳೂರಿನ ಆರ್ ಟಿ ಓ ಕಚೇರಿಯ ಹೊರಗಡೆ ಅದೇ ಹಳೆಯ ಬ್ರೋಕರುಗಳು ತಮ್ಮ ಮಾರುತಿ ವ್ಯಾನನ್ನೇ ಆಫೀಸ್ ಮಾಡಿಕೊಂಡು ಎಂದಿನಂತೆ ರಾಜಾರೋಷವಾಗಿ ತಮ್ಮ ಲಂಚದ ವ್ಯವಹಾರ ನಡೆಸುತ್ತಲೇ ಇದ್ದಾರೆ. ಇಂತಹದೆಲ್ಲಾ ಭಾರಿ ಅನುಭವಿ ಮೋದಿಯ ಮತ್ತು ತಂಡಕ್ಕೆ ಗೊತ್ತಿಲ್ಲವೆಂದೇನೂ ಅಲ್ಲ. ಗುಜರಾತಿಗಳ ರಕ್ತದಲ್ಲಿಯೇ ವ್ಯಾಪಾರ, ಲಾಭ ಮತ್ತು ಕಮಿಷನ್ ಎಂಬ ಹಸಿರು ಕಣಗಳು ಹುಟ್ಟಿನಿಂದ ಇರುವುದರಿಂದ ಅವರು ತಮ್ಮ ಹೆತ್ತ ತಾಯಿಗೂ ಯಾವುದೇ ಕೆಲಸ ಲಾಭ ಮತ್ತು ಕಮಿಷನ್ ಇಲ್ಲದೇ ಮಾಡಿ ಕೊಡುವುದಿಲ್ಲ ಎಂಬ ಮಾತು ಮುಂಬೈಯಲ್ಲಿ ಬ್ರಿಟಿಷರ ಕಾಲದಿಂದಲೂ ಚಾಲ್ತಿಯಲ್ಲಿದೆ. ಹಾಗಾಗಿ ಒಟ್ಟಾರೆ ಈ ಮೋದಿ ಸರಕಾರದ ನೋಟು ರದ್ದತಿಯ ಒಳ ಉದ್ದೇಶವೆಲ್ಲಾ ಪೇಟಿಎಂ ಮತ್ತು ರಿಲಯನ್ಸ್ ಜಿಯೋ-ಮನಿಯಂತಹಾ ಇ-ವ್ಯಾಲೆಟ್ ಡಿಜಿಟಲ್ ಪೇಮೆಂಟ್ ಕಂಪನಿಗಳಿಗೆ ಭಾರೀ ಲಾಭ ಒದಗಿಸುವುದೇ ಆಗಿತ್ತು ಎಂಬುದು ಈಗೀಗ ಜನರಿಗೆಲ್ಲಾ ಅರ್ಥವಾಗುತ್ತಿದೆ. ಗುಜರಾತಿಗಳು ಕೇವಲ ತಮ್ಮವರ ಲಾಭ ಮಾತ್ರ ನೋಡಿಕೊಳ್ಳುವುದರಲ್ಲಿ ಚಾಣಾಕ್ಷರು ಎಂಬುದು ಮತ್ತೊಮ್ಮೆ ಸಾಬೀತಾಯಿತು.
 *ಎಂ ಪ್ರಶಾಂತ್ ಮುಂಡಾಲ,
ಬಜಪೆ-ಮಂಗಳೂರು