ಹಣವಿದ್ದ ಪರ್ಸ್ ಹಿಂದಿರುಗಿಸಿ ಮಾನವೀಯತೆ ಮೆರೆದ ವ್ಯಾಪಾರಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಂಚಿಕಟ್ಟೆಯಲ್ಲಿ ಕಳೆದು ಹೋದ ಅನೇಕ ಅಸಲಿ ದಾಖಲೆಗಳು ಹಾಗೂ 7,500 ರೂ ನಗದನ್ನು ಒಳಗೊಂಡ ಪರ್ಸನ್ನು ಕುಂಬಳೆ ಪೇಟೆಯಲ್ಲಿ ಹಣ್ಣು ಹಂಪಲು ವ್ಯಾಪಾರಿಯಾಗಿರುವ ಪೆಲ್ತಡ್ಕ ನಿವಾಸಿ ಅಬ್ದುಲ್ ರಹ್ಮಾನ್ ಅವರು ಕುಂಬಳೆ ಕೋಟೆಕ್ಕಾರು ನಿವಾಸಿ ಯತೀಶ್ ಅವರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದರು.

ಕಂಚಿಕಟ್ಟೆಯಲ್ಲಿ ಅಬ್ದುಲ್ ರಹ್ಮಾನರಿಗೆ ಈ ಪರ್ಸ್ ಲಭ್ಯವಾಗಿದ್ದು, ತಕ್ಷಣ ಪರ್ಸನೊಳಗಡೆ ಕಂಡುಬಂದ ದಾಖಲು ಪತ್ರದಲ್ಲಿನ ವಿಳಾಸದಾರರನ್ನು ಸಂಪರ್ಕಿಸಿ ಕಳೆದುಹೋದ ಪರ್ಸ್ ಲಭಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ವಾರೀಸುದಾರ ಯತೀಶರಿಗೆ ಹಸ್ತಾಂತರಿಸಿದರು.