ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದವ ತಪ್ಪಿತಸ್ಥ : ಕೋರ್ಟ್

ಸಾಂದರ್ಭಿಕ ಚಿತ್ರ

ಕಾಸರಗೋಡು : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ತುಮಕೂರು ಚಿಕ್ಕನಹಳ್ಳಿ ತಾಲೂಕಿನ ದುರೈ ಸಹನಾಹಳ್ಳಿ ಉಳವೂರು ಹೌಸ್‍ನ ಶೇಖ್ ಝಿಯಾವುಲ್ಲ ಯಾನೆ ಮುಸ್ತಫ (38) ತಪ್ಪಿತಸ್ಥನೆಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ) ತೀರ್ಪು ನೀಡಿದೆ. ಶಿಕ್ಷೆಯನ್ನು ಜೂ 19ರಂದು ಘೋಷಿಸಲಿದೆ.

ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಗೊಳಪಟ್ಟ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಬಾಲಕಿಗೆ 2010ರಿಂದ 2014ರವರೆಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಕುಂಬಳೆ ಪೆÇಲೀಸರು ಕೇಸು ದಾಖಲಿಸಿದ್ದರು.


ಬುರ್ಖಾ ಧರಿಸಿ ಹಣ ದರೋಡೆ

ಕಾಸರಗೋಡು : ಬುರ್ಖಾಧರಿಸಿ ತೃಕ್ಕರಿಪುರ ಉಡುಂಬುತಲ ಪುವತ್ತಿಲ್ ಆಯಿಷಾ ಅವರ ಮನೆಗೆ ನುಗ್ಗಿ ಚಾಕು ತೋರಿಸಿ ಹತ್ಯೆ ಬೆದರಿಕೆಯೊಡ್ಡಿ 55 ಸಾವಿರ ರೂ ದರೋಡೆ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಚಂದೇರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಂಜಾನ್ ತಿಂಗಳಿನಲ್ಲಿ ಬುರ್ಖಾ ಧರಿಸಿ ಬಂದ ಹಿನ್ನೆಲೆಯಲ್ಲಿ ಆರ್ಥಿಕ ಸಹಾಯಕ್ಕಾಗಿ ಬಂದಿರಬಹುದಾಗಿ ಯೋಚಿಸಿ ಆಯಿಷಾ ಬಾಗಿಲು ತೆರೆದಿದ್ದರು.