`ಮೊಜೊ’ ಕನ್ನಡ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಗೌರವ

 ಬೆಂಗಳೂರು : ಭ್ರಮಾಲೋಕ ಮತ್ತು ವಾಸ್ತವತೆಗಳ ನಡುವಿನ ಸಂಘರ್ಷವನ್ನು ಪ್ರತಿಫಲಿಸುವ, ಚಿತ್ರ ನಾಯಕನ ಅಂತರಾತ್ಮವನ್ನು ಹೊರಗೆಡಹುವ ಹಾಗೂ ಆರನೆಯ ಇಂದ್ರಿಯ ಹಾಗೂ ಕೊಲೆ ರಹಸ್ಯವೊಂzರ ಕುತೂಹಲಕಾರಿ ಸಂಗಮವಾಗಿರುವ ವಿಶಿಷ್ಟ ಥ್ರಿಲ್ಲರ್ ಕನ್ನಡ ಸಿನೆಮಾ `ಮೊಜೊ’ ಕೊಲ್ಕತ್ತಾದ ಇಂಟರನ್ಯಾಷನಲ್ ಕಲ್ಟ್ ಫಿಲ್ಮ್ ಫೆಸ್ಟಿವಲಿನಲ್ಲಿ ಪ್ರಾಯೋಗಿಕ ಚಿತ್ರಗಳಿಗೆ ನೀಡಲಾಗುವ ಪ್ರಶಸ್ತಿ (ಔಟ್ ಸ್ಟ್ಯಾಂಡಿಂಗ್ ಎಚೀವ್ಮೆಂಟ್ ಅವಾರ್ಡ್) ಪಡೆದಿದೆ. ವಿಶ್ವದಾದ್ಯಂತ 1000 ಚಿತ್ರಗಳ ಪೈಕಿ 30 ಸಿನೆಮಾಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದ್ದರೆ, ಇವುಗಳನ್ನೆಲ್ಲಾ ಹಿಂದಿಕ್ಕಿ `ಮೊಜೊ’ ಪ್ರಶಸ್ತಿ ಬಾಚಿಕೊಂಡಿದೆ.

ಶ್ರೀಶ ಬೆಳಕವಾಡಿ ನಿರ್ದೇಶನದ, ಗಜಾನನ್ ಭಟ್ ನಿರ್ಮಾಣದಲ್ಲಿ ಪೂರ್ವಿ ಆಟ್ರ್ಸ್ ಬ್ಯಾನರ್ ನಿರ್ಮಿಸಿರುವ ಈ 110 ನಿಮಿಷಗಳ ಅವಧಿಯ ಈ ಚಲನಚಿತ್ರವನ್ನು  ಅಕ್ಟೋಬರ್ 27ರಂದು ಕರ್ನಾಟಕದಾದ್ಯಂತ 35 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು.

ಬಿಡುಗಡೆಯ ಮುನ್ನವೇ ಈ ಚಲನಚಿತ್ರ ಮೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲ ತೆರೆಕಂಡಿದ್ದರೆ, ಫೆಸ್ಟಿವಲ್ ಆಫ್ ಗ್ಲೋಬ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿದೆ.

ಮೊಜೊ ಎಂಬ ಪದ ಸಂಸ್ಕøತ/ಕ್ರಿಯೋಲ್ (ಪಶ್ಚಿಮ ಆಫ್ರಿಕಾ ಹಾಗೂ ಪೆಸಿಫಿಕ್ ಪ್ರಾಂತ್ಯಗಳಲ್ಲಿ ಮಾತನಾಡುವ ಅರ್ಧಂಬರ್ಧ ಫ್ರೆಂಚ್) ಮೂಲದ್ದಾಗಿದ್ದು ಅದರ ಅರ್ಥ ಮ್ಯಾಜಿಕ್ ಯಾ ಪವಾಡ ಆಗಿದೆ. ಅನುಷಾ ಹಾಗೂ ಮನು ಈ ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದಾರೆ.