ಪ್ರಾತ್ಯಕ್ಷಿತೆ ಬಿಡುಗಡೆ ಎಂಬ ಮೊಯ್ದಿನ್ ಬಾವ ನಾಟಕ

ಮಂಗಳೂರು : ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಸುರತ್ಕಲ್ ಮಾರುಕಟ್ಟೆಯ ಪ್ರಾತ್ಯಕ್ಷಿತೆ ಬಿಡುಗಡೆ ಎಂಬ ನಾಟಕ ನಡೆಯಿತು. ಈ ಸಭೆಗೆ ಶಾಸಕ ಮೊಯ್ದಿನ್ ಬಾವ, ಸ್ಥಳೀಯ ಕಾಪೆರ್Çರೇಟರ್, ಕಮಿಷನರ್, ಸುರತ್ಕಲ್ ನಾಗರಿಕರು, ಮಾರುಕಟ್ಟೆಯ ಎಲ್ಲ ವರ್ತಕರಿಗೂ ಆಹ್ವಾನವಿದ್ದು, ಶಾಸಕರ ಗೂಂಡಾ ಪ್ರವೃತ್ತಿ ವಿರೋಧಿಸಿದ ನಾಗರಿಕರು ಮತ್ತು ವರ್ತಕರು ಈ ಸಭೆಯನ್ನು ವಿರೋಧಿಸಿದ್ದರು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಶಾಸಕ ಬಾವ ಇತ್ತೀಚಿನ ದಿನಗಳಲ್ಲಿ ಸುರತ್ಕಲ್ ಮಾರ್ಕೆಟ್ ವಿಷಯದಲ್ಲಿ ಯಾಕಿಷ್ಟು ಅವಸರಪಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಮುಂದಿನ ಚುನಾವಣಾ ಖರ್ಚು ವೆಚ್ಚಗಳಿಗೆ ಸುರತ್ಕಲ್ ಮಾರುಕಟ್ಟೆಯ ಮೇಲೆ ಕಣ್ಣು ಹಾಕಿದ ಶಾಸಕ ಅದನ್ನು ಯಾವುದೇ ರೀತಿಯಲ್ಲಾದರೂ ನೆಲಸಮ ಮಾಡಿ ಬರುವ ಅನುದಾನದಲ್ಲಿ ತಮ್ಮ ಬೊಕ್ಕಸ ತುಂಬಿಸಲು ಮಾಡಿದ ಕೆಲಸಕ್ಕೆ ನಾಗರಿಕರು ಮತ್ತು ವರ್ತಕರಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ವರ್ತಕರು ದೂರಿದರು. ಎಲ್ಲ ವರ್ತಕರನ್ನು ಒಪ್ಪಿಸಿ, ಎಲ್ಲರ ಒಪ್ಪಿಗೆ ಪಡೆದು ತಾತ್ಕಾಲಿಕ ಕಟ್ಟಡ ಮಾಡುವ ಮೊದಲೇ ಬಿಡುಗಡೆ ಮಾಡಬೇಕಿದ್ದ ಪ್ರಾತ್ಯಕ್ಷಿತೆ ಕೇವಲ ಶಾಸಕರ ಕೆಲ ಚೇಲಾಗ ಸಮ್ಮುಖದಲ್ಲಿ ಬಿಡುಗಡೆಯಾಗಿರುವುದಕ್ಕೆ ವರ್ತಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅಲ್ಲಿ ಒಬ್ಬನೇ ಒಬ್ಬ ವರ್ತಕರಾಗಲಿ, ನಾಗರಿಕರಾಗಲಿ ಉಪಸ್ಥಿತರಿರಲಿಲ್ಲ. ಕೇವಲ 20ರಿಂದ 25  ಶಾಸಕರ ಚೇಲಾಗಳೇ ಇದ್ದರು. ಇದರಿಂದ ತೀವ್ರ ಮುಜುಗರಕ್ಕೊಳಗಾದ ಶಾಸಕ ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಮಾಧ್ಯಮದ ಮುಂದೆ ಪ್ರಾತ್ಯಕ್ಷಿತೆ ಬಿಡುಗಡೆ ಮಾಡಿದರು ಎಂದು ವರ್ತಕರು ತಿಳಿಸಿದ್ದಾರೆ.