ವಿಶ್ವವೇ ಮೆಚ್ಚುವ ಮೋದಿ ನಡೆ

ಈಚೆಗೆ ಬಹು ಮುಖ ಬೆಲೆಯ ನೋಟು ಅಮಾನ್ಯೀಕರಣಗೊಳಿಸಿ ಐತಿಹಾಸಿಕ ಹೆಜ್ಜೆಯನ್ನಿರಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಇದೀಗ ಡಿಜಿಟಲ್ ಇಂಡಿಯಾದ ಕನಸು ನನಸಾಗುವಲ್ಲಿ ವ್ಯವಹಾರವನ್ನು ನಗದುರಹಿತ ಗೊಳಿಸಿ ದೇಶದೆಲ್ಲೆಡೆ ಸಂಚಲನ ಮೂಡಿಸಿ ವಿಶ್ವವಿಡೀ ಪ್ರಶಂಸಾರ್ಹರಾಗಿದ್ದಾರೆ
ಆದರೆ ಇಂದು ವಿಪಕ್ಷೀಯ ನೇತಾರರು ಒಬ್ಬೊಬ್ಬರು ಒಂದೊಂದು ತೆರನಾಗಿ ಈ ಕ್ರಮವನ್ನು ಖಂಡಿಸುವಲ್ಲಿ, ದೇಶದಲ್ಲಿ ಅರ್ಧದಷ್ಟು ಬಡತನ ಅನಕ್ಷರತೆ  ನಿರುದ್ಯೋಗ ಇರುವಾಗ  ವಿದ್ಯುತ್ತೇ ಇಲ್ಲದ ಹಲವಾರು ಗ್ರಾಮಗಳೇ ಇರುವಾಗ  ಈ ರೀತಿಯ ಆಧುನೀಕರಣದ ನಗದು ರಹಿತ ವ್ಯವಹಾರ ಹೇಗೆ ಸಾಧ್ಯ ಎಂದು ಬಹು ವಿದ್ಯಾ ವಿಶಾರದ ಪರಿಣತ ಘಟಾನು ಘಟಿಗಳು  ತಮ್ಮದೇ ಪಕ್ಷವು ಆರು ದಶಕಗಳಿಂದ ಆಳಿದ ತಮ್ಮ ಚರಿತ್ರೆಯ ಪುಟಗಳನ್ನು ಬಿಚ್ಚಿಟ್ಟಿದ್ದು ವಿಷಾದನೀಯ

  • ಉದಯ್ ಪಡುಬಿದ್ರಿ