ಸರ್ಕಾರದ ಸಮರ್ಥನೆಗೆ ಮಾಧ್ಯಮದ ಮೊರೆ ಹೋಗಲು ಪೀಎಂ ಮೋದಿ ಕರೆ

ಅಗತ್ಯವಿದ್ದರೆ ಪೇಯ್ಡ್ ನ್ಯೂಸ್ ವಿಧಾನಗಳನ್ನು ಬಳಸಲು ಹಿಂಜರಿಯದಂತೆಯೂ ಪಕ್ಷದ

ಸಂಸದರು ಮತ್ತು ಶಾಸಕರಿಗೆ ಪ್ರಧಾನಿ ಕಾರ್ಯಾಲಯ ಆದೇಶ ನೀಡಿದೆ.

ತಮ್ಮ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆ ಮತ್ತು ಪ್ರತಿಭಟನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ವಿರುದ್ಧ ಪ್ರಚಾರವನ್ನು ತಡೆಗಟ್ಟಲು ಸೂಕ್ತ ಸಂವಹನ ತಂತ್ರಗಳನ್ನು ರೂಪಿಸುವಂತೆ ಎಲ್ಲ ಸಚಿವರಿಗೂ  ಸೂಚಿಸಿದ್ದಾರೆ.

ಮೋದಿಯ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಸಚಿವರಿಗೆ ಕಳುಹಿಸಿರುವ ಆದೇಶದಲ್ಲಿ ಜನರನ್ನು ಸುಲಭವಾಗಿ ತಲುಪುವ ತಂತ್ರಗಳನ್ನು ರೂಪಿಸುವಂತೆ  ಸೂಚಿಸಲಾಗಿದೆ. ದೂರದರ್ಶನ, ಖಾಸಗಿ ವಾಹಿನಿಗಳು ಮತ್ತು ಪ್ರಾದೇಶಿಕ, ರಾಜ್ಯ ಮಟ್ಟದ ಹಾಗೂ ರಾಷ್ಟ್ರೀಯ ಪತ್ರಿಕೆಗಳನ್ನು ಸಮರ್ಥವಾಗಿ ಬಳಸುವಂತೆ ಕರೆ ನೀಡಲಾಗಿದೆ. ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಯ ಪತ್ರಿಕೆಗಳಲ್ಲಿ ಸರ್ಕಾರದ ನೀತಿಗಳನ್ನು ಸಮರ್ಥಿಸುವ ಲೇಖನಗಳನ್ನು ಪ್ರಕಟಿಸುವುದು, ಆಕಾಶವಾಣಿ, ಎಫ್ ಎಂ ರೇಡಿಯೋ, ಖಾಸಗಿ ಎಫ್ ಎಂ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಂದರ್ಶನಗಳನ್ನು ಏರ್ಪಡಿಸುವ ಮೂಲಕ ಸರ್ಕಾರದ ನೀತಿಗಳು ಜನರಿಗೆ ಹತ್ತಿರವಾಗುವಂತೆ ಮಾಡಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಈ ವಿಧಾನಗಳನ್ನು ಅನುಸರಿಸುವುದರಿಂದ ಅತಿ ಹೆಚ್ಚು ಲಾಭವಾಗುವಂತೆ ಎಚ್ಚರ ವಹಿಸಿ ಮಾಧ್ಯಮಗಳನ್ನು ಆಯ್ಕೆ ಮಾಡಲು ಸಚಿವರಿಗೆ ಸಲಹೆ ನೀಡಲಾಗಿದೆ. ಖಾಸಗಿ ಎಸ್ಸೆಮ್ಮೆಸ್, ವಾಟ್ಸಪ್ ಪೋಸ್ಟ್ ಮತ್ತು ವಿಡಿಯೋ ಸಂದೇಶಗಳ ಮೂಲಕ ಸರ್ಕಾರದ ಯೋಜನೆ ಮತ್ತು ನೀತಿಗಳ ಉಪಯುಕ್ತತೆಯನ್ನು ಜನತೆಗೆ ಮನದಟ್ಟು ಮಾಡುವಂತೆ ಸೂಚಿಸಲಾಗಿದೆ. ಕೆಲವು ನಿರ್ದಿಷ್ಟ ವಿಚಾರಗಳಲ್ಲಿ ಜನರ ಮೇಲೆ ಅತ್ಯಧಿಕ ಪ್ರಭಾವ ಬೀರುವ ಸಾಮಥ್ರ್ಯ ಇರುವಂತಹ ಮಾಧ್ಯಮದ ವ್ಯಕ್ತಿಗಳನ್ನು ಆಯ್ಕೆ ಮಾಡುವಂತೆಯೂ ಮತ್ತು ಅಗತ್ಯವಿದ್ದರೆ ಪೇಯ್ಡ್ ನ್ಯೂಸ್ ವಿಧಾನಗಳನ್ನು ಬಳಸಲು ಹಿಂಜರಿಯದಂತೆಯೂ ಪ್ರಧಾನಿ ಕಾರ್ಯಾಲಯ ಆದೇಶ ನೀಡಿದೆ.