ಮೊಬೈಲ್ ಟವರ್ ಬ್ಯಾಟರಿ ಕಳ್ಳನ ಸೆರೆ

ನಮ್ಮ ಪ್ರತಿನಿಧಿ ವರದಿ

ಸುಳ್ಯ : ಸುಳ್ಯದ ಜಾಲ್ಸೂರು ಏರ್ಟೆಲ್ ಟವರಿನ ಬ್ಯಾಟರಿ ಕಳವುಗೈಯ್ದ ಆರೋಪಿಯನ್ನು ಸುಳ್ಯ ಪೆÇಲೀಸರು ಪತ್ತೆಹಚ್ಚಿ ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜಾಲ್ಸೂರು ನಿಡುಬೆ ಮನೆಯ ಜತಿನ್ ಎಂಬ ಯುವಕ ಬ್ಯಾಟರಿ ಕದ್ದೊಯ್ದ ವಿವರ ಪೆÇಲೀಸರಿಗೆ ಲಭಿಸಿದ ಹಿನ್ನಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣದ ಹೆಚ್ಚಿನ ಮಾಹಿತಿ ಬಯಲಾಯಿತು.