ಮೊಬೈಲ್ ಟವರ್ ಬ್ಯಾಟರಿ ಕಳವು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಕರಂಗಲ್ಪಾಡಿಯ ಅದಿತಿ ಆರ್ಕೇಡ್ ಮೇಲ್ಭಾಗದಲ್ಲಿದ್ದ ಟವರಿಗೆ ಅಳವಡಿಸಲಾಗಿದ್ದ ಜನರೇಟರಿನ ಬೆಲೆಬಾಳುವ ಇನ್ಟಾ ಪವರ್ ಕಂಪೆನಿಯ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ.

ದಿನೇಶ್ ಎಂಬವರು ಇಲ್ಲಿನ ಇಂಡಸ್ ಎಂಬ ಟವರ್ ಮೆಂಟೈನಿಂಗ್ ಕಂಪನಿಯಲ್ಲಿ ಫಿಲ್ಡ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದು, ನ 29ರಂದು ತಾನು ಮೇಲ್ವಿಚಾರಣೆ ನಿರ್ವಹಿಸಿಕೊಂಡಿರುವ ಮಂಗಳೂರು ನಗರದ ಕರಂಗಲ್ಪಾಡಿಯ ಅದಿತಿ ಆರ್ಕೇಡ್ ಮೇಲ್ಭಾಗದಲ್ಲಿರುವ ಟವರ್ ಪವರ್ ಸಪ್ಲೈ ನಿಂತು ಹೋದ ಹಿನ್ನೆಲೆಯಲ್ಲಿ ಟೆಕ್ನಿಷಿಯನ್ ಜಗನ್ನಾಥ್ ಎಂಬವರು ಬಂದು ನೋಡಿದಾಗ ಬ್ಯಾಟರಿ ಕಳವಾಗಿದೆ.

ಜನರೇಟರ್ ರೂಮ್ ಬಾಗಿಲು ತೆರೆದಿದ್ದು, ಅದರಲ್ಲಿದ್ದ ಇಸ್ಟಾ ಪವರ್ ಕಂಪೆನಿಗೆ ಸೇರಿದ ಅಂದಾಜು 8 ಸಾ ರೂ ಬೆಲೆಯ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.