ಮೆಣಸಿನಹುಡಿ ಎರಚಿ ವ್ಯಕ್ತಿಯ ಮೊಬೈಲ್ ಎಗರಿಸಿದವರ ಬಂಧನ

 ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವ್ಯಕ್ತಿಯೊಬ್ಬರ ಕಣ್ಣಿಗೆ ಮೆಣಸಿನಹುಡಿ ಎರಚಿ ಮೊಬೈಲ್ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.

ಮುಟ್ಟತ್ತೋಡಿ ಎರಿಯಪ್ಪಾಡಿ ನಿವಾಸಿ ರಫೀಕ್, ಅಲಂಪಾಡಿ ನಿವಾಸಿ ಸಲಾಂ ಎಂಬುವವರು ಬಂಧಿತ ಆರೋಪಿಗಳು. ರವಿವಾರ ಸಂಜೆ 7 ಗಂಟೆಯ ಸುಮಾರಿಗೆ ಎರ್ಮಾಳಂ ಮಸೀದಿಗೆ ಸಮೀಪದ ಕಿರುಸೇತುವೆಯ ಮೇಲೆ ಈ ಘಟನೆ ನಡೆದಿದೆ. ರಹ್ಮಾನಿಯ ನಗರದ ಅಝೀಝ್ ಎಂಬಾತನನ್ನು ಮನೆಯ ಸಮೀಪದಲ್ಲಿ ಇಳಿಸುವುದಾಗಿ ಹೇಳಿ ರಿಕ್ಷಾ ಹತ್ತಿಸಿ ಸಂಚರಿಸುವ ದಾರಿ ಮಧ್ಯೆ ಆತನ ಕಣ್ಣಿಗೆ ಮೆಣಸಿನಹುಡಿ ಎರಚಿ ಕೈಯಲ್ಲಿದ್ದ ಮೊಬೈಲನ್ನು ಅಪಹರಿಸಿ ಪರಾರಿಯಾಗಿರುವುದಾಗಿ ದೂರಲಾಗಿತ್ತು. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಆರೋಪಿಗಳಿಗೆ 2  ವಾರಗಳ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.